RNI NO. KARKAN/2006/27779|Friday, May 17, 2024
You are here: Home » breaking news » ಗೋಕಾಕ:ತಂಜೀಮ ಶಿಕ್ಷಣ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ ವಿಜ್ಞಾನ ವಸ್ತು ಪ್ರರ್ದಶನ

ಗೋಕಾಕ:ತಂಜೀಮ ಶಿಕ್ಷಣ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ ವಿಜ್ಞಾನ ವಸ್ತು ಪ್ರರ್ದಶನ 

ತಂಜೀಮ ಶಿಕ್ಷಣ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ ವಿಜ್ಞಾನ ವಸ್ತು ಪ್ರರ್ದಶನ
ಗೋಕಾಕ ಫೆ 27: ಇಲ್ಲಿಯ ತಂಜೀಮ ಶಿಕ್ಷಣ ಸಂಸ್ಥೆಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂಗಳವಾರದಂದು ವಿಜ್ಞಾನ ವಸ್ತು ಪ್ರರ್ದಶನ , ಕನ್ನಡ , ಉರ್ದು ಮತ್ತು ಇಂಗ್ಲಿಷ್ ಶುದ್ಧ ಬರಹ ಹಾಗೂ ಚಿತ್ರಕಲಾ ಪ್ರರ್ದಶನ ಏರ್ಪಡಿಸಲಾಯಿತು

ಪ್ರರ್ದಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಇಂಡಿಯನ ನೇವಿ ಸ್ವಿಫ್ , ಹ್ಯಾಡ್ರೋಲಿಕ ಜೆಸಿಬಿ , ಸೋಲಾರ ಸೀಸಟಂ , ಏರ ಕೂಲರ , ವಾಟರ ಪಂಪ , ಡ್ರೋನ ಕ್ಯಾಮೆರಾ ಸೇರಿದಂತೆ ಇತರ ಅತ್ಯಾಧುನಿಕ ವಸ್ತುಗಳನ್ನು ತಯಾರಿಸಿ ಜನಮನ ಸೆಳೆದರು

ವಸ್ತು ಪ್ರರ್ದಶನವನ್ನು ವಿಕ್ಷಿಸಿ ಸಂಸ್ಥೆಯ ಅಧ್ಯಕ್ಷ ಮತ್ತು ನಿದೇರ್ಶಕರು ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಎಮ್.ವಿ.ಖೋಜಾ , ಎ.ಎ.ದೇಸಾಯಿ , ಎಸ್.ಎ.ಖೋಜಾ , ಮುಸ್ತಾಕ ಖಂಡಾಯತ , ಶಿಕ್ಷಕರಾದ ಟಿ.ಜೆ.ಪಟೇಲ , ಎ.ಎ.ಶಾಭಾಶಖಾನ , ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: