RNI NO. KARKAN/2006/27779|Monday, July 14, 2025
You are here: Home » breaking news » ಬೆಳಗಾವಿ :ಜಾಕಿಹೊಳಿ ಸಹೋದರರ ಕಿತ್ತಾಟಕ್ಕೆ ಬ್ರೇಕ್ : ಇಂದು ಬೆಂಗಳೂರಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

ಬೆಳಗಾವಿ :ಜಾಕಿಹೊಳಿ ಸಹೋದರರ ಕಿತ್ತಾಟಕ್ಕೆ ಬ್ರೇಕ್ : ಇಂದು ಬೆಂಗಳೂರಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ 

ಜಾಕಿಹೊಳಿ ಸಹೋದರರ ಕಿತ್ತಾಟಕ್ಕೆ ಬ್ರೇಕ್ : ಇಂದು ಬೆಂಗಳೂರಿನ ಸಭೆಯಲ್ಲಿ ಮಹತ್ವದ ನಿರ್ಧಾರ ಸಾಧ್ಯತೆ

ಬೆಳಗಾವಿ ಮೇ 22: ಕಾಂಗ್ರೆಸ್ ನೂತನ ರಾಜ್ಯ ಉಸ್ತುವಾರಿ ವೇಣುಗೋಪಾಲ ನೇತೃತ್ವದ ತಂಡ ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ರಾಜ್ಯ ನಾಯಕರೊಂದಿಗೆ ಸರಣಿ ಸಭೆ ನಡೆಸಲ್ಲಿದಾರೆ
ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು, ಸಂಸದರು, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆಯಾ ವಿಭಾಗದ ಪದಾಧಿಕಾರಿಗಳೊಂದಿಗೆ ವೇಣುಗೋಪಾಲ ಚರ್ಚೆ ನಡೆಸಲಿದ್ದಾರೆ.
ಇಂದು ಜರಗುವ ಮೊದಲನೇಯ ಸಭೆಯಲ್ಲಿ ಬೆಳಗಾವಿ ವಿಭಾಗದ ಮುಖಂಡರೊಂದಿಗೆ ಚರ್ಚೆ ನಡೆಸಿ ಪಕ್ಷ ಬಲವರ್ಧನೆಗೆ ಮತ್ತಷ್ಟು ಶ್ರಮಿಸುವಂತೆ ಪಾಠ ಮಾಡಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬೆಳಗಾವಿ ಜಿಲ್ಲೆಯಲ್ಲಿ ಬುಗಿಲೆದ್ದ ಜಾರಕಿಹೊಳಿ ಸಹೋದರರ ಕಿತ್ತಾಟ್ಟಕ್ಕೆ ಬ್ರೇಕ್ ಹಾಕಲು ವೇಣುಗೋಪಾಲ ಪ್ರಯತ್ನಿಸುವರು ಎಂದು ತಿಳಿದು ಬಂದಿದೆ.

ಕಳೆದ ಕೆಲವು ತಿಂಗಳಿನಿಂದ ಸಚಿವ ರಮೇಶ ಜಾರಕಿಹೊಳಿ ಮತ್ತು ಮಾಜಿ ಸಚಿವ ಸಹೋದರ ಸತೀಶ ಜಾರಕಿಹೊಳಿ ಅವರ ಮಧ್ಯೆ ಮಾತಿನ ಸಮರವೇ ನಡೆದಿದೆ ಯಮಕನಮರಡಿ ಕ್ಷೇತ್ರದಿಂದ ಈ ಸಾರಿಯ ಚುನಾವಣೆಗೆ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಸ್ವರ್ಧಿಸುತ್ತಾರೆಂದು ಹೇಳಿಕೆ ನೀಡುವುದರ ಮುಖೇನ ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದ ಸಚಿವ ರಮೇಶ ಮೋನ್ನೇಯಷ್ಟೇ ಟಿಕೆಟ್ ಹಂಚಿಕೆ ವಿಚಾರ ಹೈಕಮಾಂಡಗೆ ಬಿಟ್ಟಿದು ಎಂದು ಹೇಳಿಕೆ ನೀಡಿ ಪ್ರಕರಣಕ್ಕೆ ಇತಿಶ್ರೀ ಹಾಡುವ ಪ್ರಯತ್ನ ಮಾಡಿದ್ದರು ಆದರೆ ಅದು ಅಷ್ಟಾಗಿ ವರ್ಕೌಟ್ ಆಗಿಲ್ಲ

ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತ್ರ ತಮ್ಮ ಹಿಂದೆ ಅಶೋಕ ಪಟ್ಟಣ, ಗಣೇಶ ಹುಕ್ಕೇರಿ, ವೀರಕುಮಾರ ಪಾಟೀಲ, ಫಿರೋಜ್ ಸೇಠ ಸೇರಿದಂತೆ ಜಿಲ್ಲೆಯ ಅನೇಕ ನಾಯಕರನ್ನು ಸೇರಿಸಿಕೊಂಡು ಮೋನ್ನೆ ಬೆಳಗಾವಿಗೆ ಬಂದಿದ್ದ ಎಐಸಿಸಿ ಕಾರ್ಯದರ್ಶಿ ಮಾಣಿಕ್ಯ ಟ್ಯಾಗೋರ್ ಅವರ ಮುಂದೆ ಜಿಲ್ಲೆಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ.

ಆ ಕಾರಣದಿಂದ ಇಂದು ರಾಜ್ಯ ಉಸ್ತುವಾರಿ ವೇಣುಗೋಪಾಲ ನಡೆಸುತ್ತಿರುವ ಸಭೆ ಬೆಳಗಾವಿ ಜಿಲ್ಲೆಯ ಪಾಲಿಗೆ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ಸಚಿವ ರಮೇಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಮತ್ತು ತಂಡ ಮಾಜಿ ಸಚಿವ ಸತೀಶ ಅವರ ವಿರುದ್ಧ ವರದಿಯನ್ನು ಸಿದ್ದಪಡಿಸಿ ವೇಣುಗೋಪಾಲ ಅವರಿಗೆ ನೀಡಲ್ಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಪಕ್ಷದಲ್ಲಿ ಅಸಮಾಧಾನ ಬುಗಿಲೆದ್ದ ಪರಿಣಾಮ ಹೊಸ ಉಸ್ತುವಾರಿ ವೇಣುಗೋಪಾಲ ಅವರಿಗೆ ಸಹಜವಾಗಿ ಇದು ತಲೆನೋವಾಗಿದೆ

ಒಟ್ಟಾರೆಯಾಗಿ ಸಹೋದರರ ಬಣಗಳನ್ನು ಒಂದು ಮಾಡಿ ಬೆಳಗಾವಿ ವಲಯದ ಸುಮಾರು 56 ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೋತಿ ಒಗ್ಗಟಾಗಿ ಚುನಾವಣೆ ಎದುರಿಸುವ ನೀಟ್ಟಿನಲ್ಲಿ ಕಾರ್ಯಪ್ರವೃತರಾಗಲು ಸೂಚಿಸಲಿದ್ದಾರೆಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ

ವೇಣುಗೋಪಾಲ ಅವರ ಈ ತಂತ್ರ ಸಫಲವಾದರೆ ಜಿಲ್ಲೆಯಲೇನೋ ಪಕ್ಷ ತಕ್ಕ ಮಟ್ಟಿಗೆ ಬಲಿಷ್ಠ ವಾದರು ಸಹ ಜಾರಕಿಹೊಳಿ ಸಹೋದರರು ಇಷ್ಟು ದಿನ ನಡೆಸಿದ ವಾಕ್ ಸಮರ ನಾಟಕೀಯ ಎಂದು ಜನ ಭಾವಿಸುವಲ್ಲಿ ಎರೆಡು ಮಾತ್ತಿಲ್ಲಾ

ಶಾಸಕನಾಗುವ ಕನಸು ಕಂಡಿರುವ ಜಾರಕಿಹೊಳಿ ಕುಟುಂಬದ ಕಿರಿಯ ಸಹೋದರ ಶ್ರೀ ಲಖನ್ ಜಾರಕಿಹೊಳಿ ಅವರಿಗೆ ರಾಜ್ಯ ಉಸ್ತುವಾರಿ ವೇಣುಗೋಪಾಲ ಅವರ ಸಂಧಾನ ಸೂತ್ರ ಮೂಳುವಾದರು ಸಹ ಅಚ್ಚರಿ ಪಡಬೇಕಾಗಿಲ್ಲ ಏಕೆಂದರೆ ರಾಜಕಾರಣದಲ್ಲಿ ಯಾವ ಬೆಳವಣಿಗೆಗಳು ಶಾಶ್ವತವಲ್ಲ .

ಒಟ್ಟಾರೇಯಾಗಿ ಪಕ್ಷದಲ್ಲಿ ಉದ್ಬವಹಿಸರುವ ಅಸಮಾಧಾನ ಹೇಗಾದರು ಆಗಿ ಮೇತ್ತಗಾಗಲಿ ಎಂದು ಪಕ್ಷದ ಕಾರ್ಯಕರ್ತರು ಜಪಿಸುತ್ತಿದ್ದಾರೆ.

Related posts: