ಗೋಕಾಕ:ವಿದ್ಯಾರ್ಥಿಗಳ ಮುದ್ದಿನ ಬಿಇಓ ಜಿ.ಬಿ.ಬಳಗಾರ ವರ್ಗಾವಣೆ
ವಿದ್ಯಾರ್ಥಿಗಳ ಮುದ್ದಿನ ಬಿಇಓ ಜಿ.ಬಿ.ಬಳಗಾರ ವರ್ಗಾವಣೆ
ಗೋಕಾಕ ಫೆ 19: – ಕಳೆದ ಸುಮಾರು 3 ವರ್ಷಗಳಿಂದ ಗೋಕಾಕ ವಲಯದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಸೃಷ್ಟಿಸಿ ಮಕ್ಕಳ ಪ್ರೀತಿಯ ಬಿಇಓ ಎನಿಸಿಕೊಂಡಿದ್ದ ಗೋಕಾಕ ಬಿಇಓ ಜಿ.ಬಿ.ಬಳಗಾರ ಅವರನ್ನು ವರ್ಗಾವಣೆ ಗೊಳಿಸಿ ಸರಕಾರ ಆದೇಶ ಹೊರಡಿಸಿದೆ
ಗೋಕಾಕ ಬಿಇಓ ಆಗಿ ದೀಪಕ್ ಶ್ರೀನಿವಾಸ ಕುರ್ಲಕಣಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಧಾರವಾಡ ಜಿಲ್ಲೆಯ ಸರಕಾರಿ ಪೌಢಶಾಲೆ ಕೋಟೂರ ಮುಖ್ಯೋಪಾಧ್ಯಾಯರಾಗಿದ್ದ ದೀಪಕ ಕುರ್ಲಕಣಿ ಅವರನ್ನು ಗೋಕಾಕ ಬಿಇಓ ಆಗಿ ನಿಯೋಜಿಸಲಾಗಿದ್ದು ಅಕ್ಷರ ದಾಸೋಹ ಚಿಕ್ಕೋಡಿ ಜಿಲ್ಲೆ ಶಿಕ್ಷಾಣಾಧಿಕಾರಿಯನ್ನಾಗಿ ಗಜಬರ ಬಾಬುಸಾಹೇಬ ಬಳಗಾರ ಅವರನ್ನು ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ಟಿ.ಡಿ.ನಾಗೇಂದ್ರ ಆದೇಶ ಹೊರಡಿಸಿದ್ದಾರೆ
ನಾಳೆ ಬಿಇಓ ಕಛೇರಿಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಗೋಕಾಕ ಬಿಇಓ ಆಗಿ ಕುರ್ಲಕಣಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ . ನಂತರ ವಲಯದ ಎಲ್ಲ ಶಿಕ್ಷಣ ಬಳಗ ಸೇರಿ ನಗರದ ನ್ಯೂ ಇಂಗ್ಲಿಷ್ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಬೀಳ್ಕೊಡುಗೆ ಸಮಾರಂಭದಲ್ಲಿ ನಿಕಟಪೂರ್ವ ಬಿಇಓ ಬಳಗಾರ ಅವರನ್ನು ಸತ್ಕರಿಸಿ ಬೀಳ್ಕೊಡುವ ಸರಳ ಕಾರ್ಯಕ್ರಮ ಜರುಗಲಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ