ಘಟಪ್ರಭಾ:ಬಡ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಅಗತ್ಯಿವಿದೆ : ತ್ರೀಕಾಲ ಪಾಟೀಲ
ಬಡ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಅಗತ್ಯಿವಿದೆ : ತ್ರೀಕಾಲ ಪಾಟೀಲ
ಘಟಪ್ರಭಾ ಫೆ 19:- ಬಡ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯದ ಅಗತ್ಯಿವಿದೆ ಎಂದು ತ್ರೀಕಾಲ ಪಾಟೀಲ ಹೇಳಿದರು.
ಅವರು ಶನಿವಾರ ಮಲ್ಲಾಪೂರ ಪಿ.ಜಿ ದಣಗಳ ಪೇಟೆಯಲ್ಲಿರುವ ಶ್ಯಾರೋಣ ಅನಾಥ ಮತ್ತು ಅಂಗವಿಕಲ ಮಕ್ಕಳ ಆಶ್ರಮದಲ್ಲಿ ಶ್ಯಾರೋಣ ಸೋಶಿಯಲ್ ಕಮ್ಯೂನಿಟಿ ಡೆವಲೆಪ್‍ಮೆಂಟ್ ಟ್ರಸ್ಟ್ ಹಾಗೂ ಕನ್ನಡ ಸೇನೆ ಸಂಘಟನೆ ವತಿಯಿಂದ ಹಮ್ಮಿಕೊಂಡ ತಮ್ಮ 27 ನೇ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,
ಆಶ್ರಮದಲ್ಲಿರುವ ಅನಾಥ ಅಂಗವಿಕಲ ನೂರಾರು ಮಕ್ಕಳ್ಳಿಗೆ ಅಗತ್ಯವಿರುವ ಸಹಾಯ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲು ಪ್ರಯತ್ನಿಸಲಾಗುವುದು. ಅಲ್ಲದೇ ನಮ್ಮ ಕುಟುಂಬದಿಂದ ಕೈಲಾದಷ್ಟು ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕನ್ನಡ ಸೇನೆ ಉಪಾಧ್ಯಕ್ಷ ಡಾ.ರಾಘವೇಂದ್ರ ಪತ್ತಾರ ಮಾತನಾಡಿ, ಜನರು ವಿವಿಧ ರೀತಿಯಲ್ಲಿ ಹುಟ್ಟು ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ತ್ರೀಕಾಲಣ್ಣಾ ಅವರು ಬಡ ಮಕ್ಕಳ ಮದ್ಯೆ ತಮ್ಮ ಹುಟ್ಟು ಹಬ್ಬ ಆಚರಿಸುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾಗ್ಯಶ್ರೀ ಅಮರಸಿಂಹ ಪಾಟೀಲ, ಕು. ಪೂರ್ಣಿಮಾ ಅಮರಸಿಂಹ ಪಾಟೀಲ, ಕನ್ನಡ ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ಸಂಗ್ರೋಜಿ, ಪುಣಿತಾ ಸಂಗ್ರೋಜಿ, ಅತುಲ ಶಿಂದೆ, ಸಂತೋಷ ಸಂಗನಾಳೆ, ಬಾಬುರಾವ ಬೈಲಪತ್ತಾರ, ಸಚ್ಚಿನ ಬೈಲಪತ್ತಾರ, ಉಮೇಶ ಪಂಚಮಿ ಸೇರಿದಂತೆ ಅನೇಕರು ಇದ್ದರು.