RNI NO. KARKAN/2006/27779|Wednesday, October 15, 2025
You are here: Home » breaking news » ಘಟಪ್ರಭಾ:ವಿದ್ಯುತ್ ಅವಘಡ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮ

ಘಟಪ್ರಭಾ:ವಿದ್ಯುತ್ ಅವಘಡ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮ 

ವಿದ್ಯುತ್ ಅವಘಡ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮ
ಘಟಪ್ರಭಾ ಫೆ 7 : ಇಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಕೀರ್ತಿ ಬಾರ್ & ರೆಸ್ಟೊರೆಂಟ್‍ಗೆ ಇಂದು ಬೆಳಿಗ್ಗಿನ ಜಾವ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಹೋಗಿವೆ. ಒಳಗಡೆ ಮಲಗಿದ ಕೆಲಸಗಾರರು ಇನ್ನೊಂದು ಕಟ್ಟಡಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಬಾರ್ ಕೌಂಟರನ ಹತ್ತಿರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಿದ್ಯುತ್ ಅವಘಡದಿಂದ ಬೆಂಕಿ ಹತ್ತಿಕೊಂಡು ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದ್ದು ಕೌಂಟರ ಹತ್ತಿರ ಹೆಚ್ಚಿನ ದರ ಮದ್ಯದ ಬಾಟಲಿ, ಪ್ರೀಜ್, ಕಂಪ್ಯೂಟರ್, ಟಿವಿ, ಹಾಗೂ ಇನ್ನಿತರ ಬೆಲೆ ಬಾಳುವ ಸಾಮಾಗ್ರಿಗಳು ಸುಟ್ಟು ಹೋಗಿವೆ. ಅಗ್ನಿಶ್ಯಾಮಕದವರು ಸ್ಥಳಕ್ಕೆ ಬರುವುದರಲ್ಲಿ ಕೆಲಸಗಾರರು ಬೊರವೆಲ್ ಚಾಲು ಮಾಡಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಪೋಲಿಸ್ ಇಲಾಖೆ, ಹೆಸ್ಕಾಂ ಇಲಾಖೆ ಹಾಗೂ ಅಬಕಾರಿ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related posts: