ಘಟಪ್ರಭಾ:ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಮಹಾ ವಿದ್ಯಾಲಯದಿಂದ ಸನ್ಮಾನ
ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಮಹಾ ವಿದ್ಯಾಲಯದಿಂದ ಸನ್ಮಾನ
ಘಟಪ್ರಭಾ ಫೆ 7: ಸ್ಥಳೀಯ ಎಸ್.ಆರ್.ಡಿ ಸೋಸಾಯಿಟಿಯ ಶಾಲಿನಿ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿ ಅಪ್ಪಯ್ಯ ಭೀ.ಮಾಳ್ಯಾಗೋಳ ಇವರು ಇತ್ತೀಚಿಗೆ ಗೋಕಾಕದಲ್ಲಿ ಜರುಗಿದ 17 ನೇ ಸತೀಶ ಶುಗರ್ಸ್ ಅವಾಡ್ಸ್‍ನಲ್ಲಿ ಭಾಗವಹಸಿ ಸೈಕ್ಲಿಂಗ್ ಸ್ಪರ್ಧೇಯಲ್ಲಿ ಪ್ರಥಮ ಸ್ಥಾನ ಪಡೆದು ಮಹಾ ವಿದ್ಯಾಲಯದ ಕೀರ್ತಿ ಹೆಚ್ಚಿಸಿದ ನಿಮಿತ್ಯವಾಗಿ ಅವರನ್ನು ಆಡಳಿತ ಮಂಡಳಿಯ ಪರವಾಗಿ ಬುಧವಾರದಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶಶಿರೇಖಾ ಮಹೇಶ ಕುಮಟಿ, ಪ್ರಾಚಾರ್ಯರಾದ ರಣಧೀರ ಕಾಂಬಳೆ, ಉಪನ್ಯಾಸಕರಾದ ಉತ್ತಮ ಮಾನೆ, ಶಿವಾನಂದ ಗಸ್ತಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.