ಗೋಕಾಕ:ಸರಕಾರಿ ಪದವಿ ಕಾಲೇಜು ಪುನಚ್ಚೇತನಕ್ಕೆ ಅತ್ಯಂತ ಶೀಘ್ರದಲ್ಲೇ ಕ್ರಮ : ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ
ಸರಕಾರಿ ಪದವಿ ಕಾಲೇಜು ಪುನಚ್ಚೇತನಕ್ಕೆ ಅತ್ಯಂತ ಶೀಘ್ರದಲ್ಲೇ ಕ್ರಮ : ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 24:
ಗೋಕಾಕ ಸರಕಾರಿ ಪದವಿ ಕಾಲೇಜು ಪುನಚ್ಚೇತನಕ್ಕೆ ಅತ್ಯಂತ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ ಹೇಳಿದರು
ಮಂಗಳವಾರದಂದು ನಗರದ ಪದವಿ ಕಾಲೇಜಗೆ ಭೇಟಿನೀಡಿ ಕಾಲೇಜು ಪರಿಶೀಲಿಸಿದ ನಂತರ ಪತ್ರಕರ್ತರನ್ನು ಉದ್ಧೇಶಿಸಿ ಅವರು ಮಾತನಾಡಿದರು
ಗೋಕಾಕ ಪದವಿ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅತಿ ಬೇಗನೆ ಇದೇ ಸ್ಥಳದಲ್ಲಿ ಅಥವಾ ಸರಕಾರದ ಬೇರೆ ಜಾಗವೊಂದರಲ್ಲಿ ಪದವಿ ಕಾಲೇಜಿಗೆ ಹೊಸ ಕಟ್ಟಡ ಕಟ್ಟಲು ಸ್ಥಳೀಯ ಆಡಳಿತಕ್ಕೆ ಸೂಚಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು
ಬೆಳಗಾವಿ ವಿಟಿಯುನಲ್ಲಿ ಕಳೆದ ಹತ್ತಾರು ವರ್ಷಗಳಿಂದ ಬೆಂಗಳೂರು ಮತ್ತು ಗದಗದಿಂದ ನಿಯೋಜನೆ ಮೆರೆಗೆ ಬಂದು ಹತ್ತಾರು ವರ್ಷಗಳಿಂದ ಇಲ್ಲಿಯೇ ಟಿಕಾಣಿ ಹೂಡಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಇಲಾಖೆಯಲ್ಲಿ ಹೊಸ ಹುದ್ಧೆಗಳನ್ನು ನೇಮಕಮಾಡಿಲು ವಿಳಂಭವಾದ ಪರಿಣಾಮ ಕಾನೂನಾತ್ಮಕವಾಗಿ ಕೆಲವರನ್ನು ನಿಯೋಜನೆ ಮೆರೆಗೆ ವರ್ಗವಾಗಿ ಬಂದಿದ್ದಾರೆ. ಯಾರಾದರೂ ಇಲಾಖೆಯ ನಿಯಮವನ್ನು ಮೀರಿ ಇಲ್ಲಿಯೆ ಉಳಿದಿದ್ದರೆ ಅಂತಹವರನ್ನು ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಚಿವ ರಮೇಶ ಜಾರಕಿಹೊಳಿ ಅವರು ಅವರ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ದೆಹಲಿಯಲ್ಲಿ ಲಾಭಿ ನಡೆಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ರಮೇಶ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರ ಪರ ಕೆಲಸ ಮಾಡುವುದು ಸಾಮಾನ್ಯ ಅವರು ಅವರ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಈ ಕುರಿತು ಸೂಕ್ತ ನಿರ್ಧಾರ ತಗೆದುಕೊಳ್ಳುತ್ತಾರೆ. ಸಚಿವ ಸಂಪುಟ ವಿಸ್ತರಣೆ ವಿಳಂಭವಾಗಿಲ ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತಗೆದುಕೊಳ್ಳುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ , ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ , ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ , ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ಪ್ರಭಾರ ಪ್ರಾಚಾರ್ಯ ಮಹೇಶ ಕಂಬಾರ ಇದ್ದರು.