RNI NO. KARKAN/2006/27779|Saturday, May 18, 2024
You are here: Home » breaking news » ಗೋಕಾಕ:ಪ್ರಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ : ಮೇಧಾ ಪಾಟಕರ

ಗೋಕಾಕ:ಪ್ರಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ : ಮೇಧಾ ಪಾಟಕರ 

ಪ್ರಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ : ಮೇಧಾ ಪಾಟಕರ

ಗೋಕಾಕ ಫೆ 2 : ಪ್ರಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ. ನಿಸರ್ಗದ ಮಡಿಲಲ್ಲಿ ನಾವು ಬದುಕುತ್ತಿದ್ದೇವೆ. ನಿಸರ್ಗವನ್ನು ನಾವು ಕಾಪಾಡಿದರೇ ನಮ್ಮನ್ನು ನಿಸರ್ಗ ಕಾಪಾಡುತ್ತದೆ ಎಂದು ನರ್ಮದಾ ಬಚಾವೋ ಅಂದೋಲನದ ರೂವಾರಿ ಹಾಗೂ ಸಾಮಾಜಿಕ ಚಿಂತಕಿ ಮುಂಬೈನ ಮೇಧಾ ಪಾಟಕರ ಹೇಳಿದರು.
ಅವರು ಶುಕ್ರವಾರದಂದು ಸಂಜೆ ನಗರದ ಶೂನ್ಯ ಸಂಪಾದನಾ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ 13ನೇ ಪುಣ್ಯಸ್ಮರಣೋತ್ಸವ ಹಾಗೂ ಶರಣ ಸಂಸ್ಕøತಿ ಉತ್ಸವ ಮತ್ತು ಮಹಿಳಾಗೋಷ್ಠಿ ಹಾಗೂ ಶ್ರೀಮಠದಿಂದ ನೀಡುವ 2018ನೇ ಸಾಲಿನ ಕಾಯಕಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ನಾಡಿನ ಹಿರಿಯ ಸಾಧಕರನ್ನು ಗುರುತಿಸಿ ಅವರಿಗೆ ಕಾಯಕಶ್ರೀ ಪ್ರಶಸ್ತಿ ನೀಡುತ್ತಿರುವ ಶ್ರೀಮಠದ ಕಾರ್ಯ ಶ್ಲಾಘನೀಯವಾಗಿದೆ. ಈ ಪ್ರಶಸ್ತಿ ನೀಡಿದ್ದು ಒಂದೆಡೆ ಖುಷಿ ಮತ್ತೊಂದೆಡೆ ದು:ಖವೆನುಸುತ್ತಿದೆ. ಕೃಷಿ ಪ್ರಧಾನವಾದ ನಮ್ಮ ದೇಶವು ಕೃಷಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮಹಿಳೆಯು ಮುಂಚೂಣಿಯಲ್ಲಿದ್ದಾಳೆ. ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ,ಅನ್ಯಾಯದ ವಿರುದ್ಧ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮಹಿಳೆಗೆ ಸಂರಕ್ಷಣೆ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮಹಿಳೆಯರು ಮನಸ್ಸು ಮಾಡಿದರೇ ಏನೂ ಬೇಕಾದರೂ ಮಾಡಬಹುದು ಎನ್ನುವದಕ್ಕೆ ಸಾಲುಮರದ ತಿಮ್ಮಕ್ಕನ ಸಾಧನೆಯೇ ಮುಖ್ಯವಾಗಿದೆ. ಕಳೆದ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಜಾತಿ,ಮತ ಭೇದ ಭಾವ ಮರೆತು ಎಲ್ಲರೂ ಒಂದೇ ಎಂಬ ಮನೋಭಾವನೆ ಹೊಂದಬೇಕು ಎಂಬ ಸಂದೇಶವನ್ನು ನೀಡಿದ್ದಾರೆ. ಅಂತಹ ಮಹಾತ್ಮ ವಾಣಿಯಂತೆ ನಡೆದುಕೊಂಡರೇ ನಮ್ಮ ದೇಶ ಸಮೃದ್ಧವಾಗುತ್ತದೆ. ನೀರು ಉಳಿಸುವ ಪ್ರಯತ್ನ ಮನುಷ್ಯನ ಆದ್ಯ ಕರ್ತವ್ಯವಾಗಿದೆ. ಗೌರಿ ಲಂಕೇಶ, ಸಾಹಿತಿ ಕಲಬುರ್ಗಿ, ಗೋವಿಂದರಾವ್ ಸೇರಿದಂತೆ ಹಲವಾರು ಜನರನ್ನು ಕೊಲೆ ಮಾಡಿದ್ದು ಅವರಿಗೆ ರಕ್ಷಣೆ ಇಲ್ಲವೇ ಸಮಾಜದಲ್ಲಿ ಆಗುವ ದುರ್ಘಟನೆಗಳಿಗೆ ಇಂತಹ ಮಹಾನ್ ವ್ಯಕ್ತಿಗಳು ಜೀವ ಕಳೆದುಕೊಳ್ಳಬೇಕಾಯಿತು. ಇಂದು ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಘರ್ಷಣೆ ಉಂಟು ಮಾಡುತ್ತಿರುವ ಸಮಾಜಘಾತುಕರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಮಹಿಳೆಯರು ಮೊದಲು ಶಿಕ್ಷಣವಂತರಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಪರಿಸರದ ಮತ್ತು ವಿಜ್ಞಾನ ಅರಿವು ಮೂಡಿಸುವಂತಹ ಕಾರ್ಯ ಮಾಡಿದಾಗ ಮಾತ್ರ ದೇಶವು ಸದೃಢವಾಗುತ್ತದೆ ಆ ಶಕ್ತಿ ಮಹಿಳೆಗೆ ಇದೆ ಎಂದರಲ್ಲದೇ ದೇಶಕ್ಕೆ ಅನ್ನ ನೀಡುವ ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿರುವುದು ಖೇಧಕರ ಸಂಗತಿಯಾಗಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ , ಸುಣಧೋಳಿಯ ಜಡಿಸಿದೇಶ್ವರ ಮಹಾಸ್ವಾಮಿಗಳು ಹಾಗೂ ಬಾವನ ಸವದತ್ತಿಯ ಓಂಕಾರೇಶ್ವರ ಮಠದ ಶ್ರೀ ಶಿವಶಂಕರ ಮಹಾಸ್ವಾಮಿಜಿ ಹಾಗೂ ಶ್ರೀ ಭ್ರಮರಾಂಭಾದೇವಿ ವಹಿಸಿದ್ದರು.
ಅಧ್ಯಕ್ಷತೆಯನ್ನು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ನಾಡೋಜ ಡಾ. ಸಾಲು ಮರದ ತಿಮ್ಮಕ್ಕ ವಹಿಸಿದ್ದರು. ವೇದಿಕೆ ಮೇಲೆ ಹುಣಶ್ಯಾಳ ಪಿಜಿಯ ಶ್ರೀ ನಿಜಗುಣ ದೇವರು, ಕಾಶಿನಾಥ ಸ್ವಾಮಿಜಿ, ಸಂಗನಬಸವ ಸ್ವಾಮಿಜಿ, ಪ್ರಭುಲಿಂಗ ಸ್ವಾಮಿಜಿ, ಸಿದ್ಧಲಿಂಗ ಸ್ವಾಮಿಜಿ, ಶಿವಾನಂದ ಸ್ವಾಮಿಜಿ, ಬಸವಲಿಂಗ ಸ್ವಾಮಿಜಿ, ಶಿವಲಿಂಗ ಮುರುಘರಾಜೇಂದ್ರ ಸ್ವಾಮಿಜಿ, ಸಿದ್ಧಪ್ರಭು ಶಿವಾಚಾರ್ಯರು, ವಿಜಯಸಿದ್ದೇಶ್ವರ ಸ್ವಾಮಿಜಿ, ಕಲ್ಮೇಶ ಸ್ವಾಮಿಜಿ, ಡಾ| ಜ್ಯೋತಿ ಶಿಂಧೋಳಿಮಠ, ಡಾ| ಕವಿತಾ ಗೋರೋಶಿ, ಡಾ| ಗೀತಾ ಪಟಗುಂದಿ, ಡಾ| ಅರ್ಚನಾ ಉಪ್ಪಿನ, ಗೌರವ್ವ ಜವರಗಿ, ಸುಶೀಲಾ ಕುಮಾರಮಠ (ಕಲ್ಲೋಳಿ), ಶಶಿಕಲಾ ಸಣ್ಣಕ್ಕಿ, ಮಹಾಲಕ್ಷ್ಮೀ ಈಟಿ ಸೇರಿದಂತೆ ಇತರರು ಇದ್ದರು.
ಡಾ| ಸಿ.ಕೆ.ನಾವಲಗಿ ಕಾಯಕಶ್ರೀ ಪ್ರಶಸ್ತಿಯ ಬಿತ್ತಳಿಕೆಯನ್ನು ಓದಿದರು. ಎಸ್.ಕೆ.ಮಠದ ನಿರೂಪಿಸಿದರು. ಅಡಿವೇಶ ಗವಿಮಠ ವಂದಿಸಿದರು.

Related posts: