ಗೋಕಾಕ:ಗೋವಾ ಸಚಿವ ವಿನೋದ್ ಪಾಲೇಕರ ನಾಲಿಗೆ ಕತ್ತರಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಕ್ರೋಶ
ಗೋವಾ ಸಚಿವ ವಿನೋದ್ ಪಾಲೇಕರ ನಾಲಿಗೆ ಕತ್ತರಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಕ್ರೋಶ
ಗೋಕಾಕ ಜ 14: ಕನ್ನಡಿಗರನ್ನು ಹರಾಮಿಗಳೆಂದು ಉಲ್ಲೇಖಿಸಿರುವ ನಾಡ ವಿರೋಧಿ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರನ ನಾಲಿಗೆ ಕತ್ತರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನಿಡಿರುವ ಅವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಗೋವಾ ಸಚಿವ ವಿನೋದ್ ಪಾಲೇಕರ ಕನ್ನಡಿಗರನ್ನು ಅವಮಾನಿಸಿರುವುದು ತರವಲ್ಲ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ವಿನೋದ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಮಹಾದಾಯಿ ವಿಚಾರವನ್ನು ಸೌಹಾರ್ದಯುತವಾಗಿ ಬಗೆಹರಿಸುವುದನ್ನು ಬಿಟ್ಟು ಕನ್ನಡಿಗರನ್ನು ನಿಂಧಿಸಿರುವ ಪಾಲೇಕರ ಕೂಡಲೇ ಕನ್ನಡಿಗರ ಕ್ಷೇಮೆ ಕೇಳಬೇಕು ಹಿಂತಹ ವ್ಯಕ್ತಿಯನ್ನು ಸಚಿವ ಮಾಡಿರುವ ಗೋವಾ ಸಿಎಂ ಪರೀಕರ ಇತನನ್ನು ಸಂಪುಟದಿಂದ ವಜಾಗೊಳಿಸಬೇಕು .
ಮುಂದಿನ ದಿನಗಳಲ್ಲಿ ಕರವೇಯಿಂದ ಇತನಿಗೆ ತಕ್ಕ ಪಾಠ ಕಲಿಸಲಾಗುವುದು ಈ ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸ್ವಯಂ ಪ್ರೇರಣೆಯಿಂದ ಇತನ ಮೇಲೆ ಪ್ರಕರಣ ದಾಖಲಿಸಬೇಕೆಂದು ಖಾನಪ್ಪನವರ ಆಗ್ರಹಿಸಿದ್ದಾರೆ