ಘಟಪ್ರಭಾ:ಪತ್ರಕರ್ತರಿಗೆ ಗ್ರಾಮೀಣಕೂಟ್ ಬ್ಯಾಂಕ ವತಿಯಿಂದ ಸೆನೆಟೈಜರ್ ಹಾಗೂ ಮಾಸ್ಕ ವಿತರಣೆ
ಪತ್ರಕರ್ತರಿಗೆ ಗ್ರಾಮೀಣಕೂಟ್ ಬ್ಯಾಂಕ ವತಿಯಿಂದ ಸೆನೆಟೈಜರ್ ಹಾಗೂ ಮಾಸ್ಕ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜು 15 :
ಸ್ಥಳೀಯ ಪತ್ರಕರ್ತರಿಗೆ ಗ್ರಾಮೀಣಕೂಟ್ ಬ್ಯಾಂಕ ವತಿಯಿಂದ ಸೆನೆಟೈಜರ್ ಹಾಗೂ ಮಾಸ್ಕಗಳನ್ನು ಗುರುವಾರ ವಿತರಿಸಿಲಾಯಿತು.
ಬ್ಯಾಂಕಿನ ವಲಯ ವ್ಯವಸ್ಥಾಪಕ ಜಿ.ವಿ.ವಿಶ್ವನಾಥ ಮಾತನಾಡಿ, ಆರೋಗ್ಯ ಮತ್ತು ಪೊಲೀಸ ಸಿಬ್ಬಂದಿಗಳ ಜೊತೆಗೆ ಕೊರೋನಾ ವಾರಿಯರ್ಸ್ ಆಗಿ ಮುಂಚುನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೂ ಕೂಡಾ ಸುರಕ್ಷತೆ ಅಗತ್ಯವಾಗಿದ್ದು, ಇದನ್ನು ಅರಿತು ನಮ್ಮ ಸಂಸ್ಥೆಯಿಂದ ಪತ್ರಕರ್ತರಿಗೆ ಸೆನೆಟೈಜರ್ ಹಾಗೂ ಮಾಸ್ಕಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ದಿಲಾವರ ಬಾಳೇಕುಂದ್ರಿ, ಸಲೀಮ ಕಬ್ಬೂರ, ಜಿ.ಎಸ್.ರಜಪೂತ, ಕೂಟ್ ಬ್ಯಾಂಕ ಘಟಪ್ರಭಾ ಶಾಖಾ ವ್ಯವಸ್ಥಾಪಕ ಜಿ.ಡಿ.ಔಳಿಹಾಳ, ಹಾಗೂ ಉಮೇಶ ಆರ್.ಜಿ, ಬ್ಯಾಂಕಿನ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.