RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಸೇವಾ ಮನೋಭಾವದಿಂದ ಪಾಲ್ಗೊಳ್ಳಿ : ಯುವ ಧುರೀಣ ಲಖನ್ ಜಾರಕಿಹೊಳಿ

ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಸೇವಾ ಮನೋಭಾವದಿಂದ ಪಾಲ್ಗೊಳ್ಳಿ : ಯುವ ಧುರೀಣ ಲಖನ್ ಜಾರಕಿಹೊಳಿ 

ಧಾರ್ಮಿಕ ಕಾರ್ಯಗಳಲ್ಲಿ ಸೇವಾ ಮನೋಭಾವದಿಂದ ಪಾಲ್ಗೊಳ್ಳಿ : ಯುವ ಧುರೀಣ ಲಖನ್ ಜಾರಕಿಹೊಳಿ

ಗೋಕಾಕ ಡಿ 10: ಧಾರ್ಮಿಕ ಕಾರ್ಯಗಳಲ್ಲಿ ಸೇವಾ ಮನೋಭಾವದಿಂದ ಪಾಲ್ಗೊಳ್ಳುವುದರಿಂದ ದೇವರ ಅನುಗ್ರಹದೊಂದಿಗೆ ನೆಮ್ಮದಿ, ಉತ್ಸಾಹ, ಉಲ್ಲಾಸ ತೊರೆಯುತ್ತದೆ ಎಂದು ಯುವ ಧುರೀಣ ಲಖನ್ ಜಾರಕಿಹೊಳಿ ಹೇಳಿದರು.
ಶನಿವಾರದಂದು ಸಂಜೆ ಇಲ್ಲಿಯ ಆದಿತ್ಯ ನಗರದಲ್ಲಿ ಶ್ರೀ ಆಂಜನೇಯ ದೇವರ ಕಾರ್ತೀಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವರ ಶಕ್ತಿಯಿಂದ ನಮ್ಮೆಲ್ಲರ ಏಳ್ಗೆಯ ಜೊತೆಗೆ ನಗರದ ಅಭಿವೃದ್ದಿ ಯಾವುದೆ ತೊಂದರೆಗಳಿಲ್ಲದೇ ಸರಾಗವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ದೇವರ ಅನುಗ್ರಹ ಹಾಗೂ ತಂದೆ-ತಾಯಿಗಳ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಜನತೆಯ ಆಶಿರ್ವಾದದೊಂದಿಗೆ ಸಹೋದರ ರಮೇಶ ಜಾರಕಿಹೊಳಿ ಅವರು ಶಾಸಕರಾಗಿ, ಸಚಿವರಾಗಿ ನಾಡಿನ ಅಭಿವೃದ್ದಿ ಜೊತೆಗೆ ನಗರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ನಗರದಲ್ಲಿ ನೀರು, ವಿದ್ಯುತ್ತ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯ ಪದ್ಧತಿಯಡಿಯಲ್ಲಿ ಎಲ್ಲ ಸಮುದಾಯಗಳ ಅಭಿವೃದ್ದಿಗೆ ಮಹತ್ವ ನೀಡಿ ನಿಮ್ಮಲ್ಲರ ಆಶಿರ್ವಾದ ಹಾಗೂ ಸಹಕಾರದೊಂದಿಗೆ ಜಾರಕಿಹೊಳಿ ಕುಟುಂಬ ಶ್ರಮಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕೂಡಾ ರಾಜಕೀಯವಾಗಿ ತಮ್ಮ ಬೆಂಬಲ ಸದಾ ನಮ್ಮ ಮೇಲೆ ಇರಲಿ ಎಂದು ವಿನಂತಿಸಿದರು.
ವೇದಿಕೆ ಮೇಲೆ ಜಿಪಂ ಸದಸ್ಯ ಮಡೆಪ್ಪ ತೋಳಿನವರ, ಶ್ರೀ ಆಂಜನೇಯ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಕೆಂಚಪ್ಪ ಗೌಡಪ್ಪಗೋಳ, ಉಪಾಧ್ಯಕ್ಷ ಆರ್.ಬಿ.ಮಾವಿನಗಿಡದ, ಎಲ್.ಎಲ್.ಓಜಪ್ಪಗೋಳ, ನಗರ ಸಭೆ ಸದಸ್ಯ ಸಿದ್ದಪ್ಪ ಹುಚ್ಚರಾಮಪ್ಪಗೋಳ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಮ್.ಕೆ.ಪಾತ್ರೋಟ, ಹೆಸ್ಕಾಂನ ಅಧಿಕಾರಿಗಳಾದ ಕೆ.ಬಿ.ಸಣ್ಣಕ್ಕಿ, ಎಮ್.ಎಸ್.ನಾಗನ್ನವರ, ಎಸ್.ಪಿ.ವರಾಳೆ ಇದ್ದರು.
ಎಸ್.ವಿ.ಕದಮ್ ಸ್ವಾಗತಿಸಿದರು, ಟಿ.ಬಿ.ಬಿಲ್ ನಿರೂಪಿಸಿದರು. ಸಿ.ಎ.ಕಾಡನ್ನವರ ವಂದಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಆಂಜನೇಯ ದೇವರ ಪಲ್ಲಕ್ಕಿ ಉತ್ಸವ ಹಾಗೂ ಮದ್ದು ಹಾರಿಸುವ ಕಾರ್ಯಕ್ರಮ ಜರುಗಿತು. ನಂತರ ಚಿಕ್ಕಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿದವು.

Related posts: