ಗೋಕಾಕ:ದೈನಂದಿನ ಕಾರ್ಯಗಳೊಂದಿಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಿ : ಯುವಕರಿಗೆ ಯುವ ಧುರೀಣ ಲಖನ್ ಕರೆ
ದೈನಂದಿನ ಕಾರ್ಯಗಳೊಂದಿಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಿ : ಯುವಕರಿಗೆ ಯುವ ಧುರೀಣ ಲಖನ್ ಕರೆ
ಗೋಕಾಕ ಡಿ 9 : ಇಂದಿನ ಯಾಂತ್ರಿಕ ಯುಗದಲ್ಲಿ ಯುವಕರು ಮೊಬೈಲಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೇ ತಮ್ಮ ದೈನಂದಿನ ಕಾರ್ಯಗಳೊಂದಿಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಬೇಕೆಂದು ಯುವ ಧುರೀಣ ಲಖನ್ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಇಲ್ಲಿಯ ಯುಥ ಪುಟ್ಬಾಲ್ ಕ್ಲಬ್‍ನವರ ಆಯೋಜಿಸಿದ್ದ ಆದಿತ್ಯಾ ಟ್ರೋಫಿ ಮುಕ್ತ ಅಂತರರಾಜ್ಯಮಟ್ಟದ ಪುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು.
ಇಂದಿನ ಒತ್ತಡದ ಜೀವನದಲ್ಲಿ ಯುವಕರು ದುಶ್ಚಟಗಳಿಗೆ ಮಾರು ಹೋಗದೇ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರಲ್ಲದೇ ಕ್ರೀಡಾಪಟುಗಳು ಸೋಲು ಗೆಲುವಿಗೆ ಮಹತ್ವ ನೀಡದೇ ಕ್ರೀಡಾಮನೋಭಾವದಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿ ಪ್ರತಿಭಾನ್ವಿತ ಕ್ರೀಡಾಪಟುಗಳಾಗಿ ನಾಡಿಗೆ ಕೀರ್ತಿ ತನ್ನಿರೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಅಮರನಾಥ ಜಾರಕಿಹೊಳಿ, ಅಶೋಕ ಸಾಯನ್ನವರ, ಸದಾನಂದ ಕಲಾಲ, ಬಸವರಾಜ ಸಾಯನ್ನವರ, ಭಗವಂತ ಹುಳ್ಳಿ, ಆಸಿಫ್ ಮುಲ್ಲಾ, ರೇವಣ್ಣ ಎಚ್.ಆರ್. ಸಂಜು ಜಡಿನವರ, ರಮೇಶ ಬಡೆಪ್ಪಗೋಳ, ಲಕ್ಷ್ಮೀಕಾಂತ ಕುಂದರಗಿ, ಮಹಾದೇವ ಜಾಗನೂರ, ಆಕಾಶ ಭೂತಿ, ಮಂಜು ಮಾಳಗಿ, ಶ್ರವಣ ರಡ್ಡೆರ, ಅನ್ವಿತ ಪಾಟೀಲ, ಅಮೃತ ಹೂಗಾರ, ಸುಶೀಲ ಕಮಟೆಕರ, ಪಂದ್ಯಾವಳಿಗಳ ನಿರ್ಣಾಯಕರಾದ ಎ.ಎಸ್.ಸಾಮಂತ, ವಿ.ಸಿ.ಹೊಸುರ, ಲಕ್ಷ್ಮೀಕಾಂತ ಆರ್.ಡಿ. ಸೇರಿದಂತೆ ಅನೇಕರು ಇದ್ದರು