ಗೋಕಾಕ:ಚೆಕ್‍ಪೋಸ್ಟ್‍ಗೆ ಉಪವಿಭಾಗಾಧಿಕಾರಿ ಮತ್ತು ಚುನಾವಣಾಧಿಕಾರಿಗಳ ಭೇಟಿ

ತಾಲೂಕಿನ ಘಟಪ್ರಭಾದ ಜೆಜಿಕೋ ಚೆಕ್ ಪೋಸ್ಟ್‍ಗೆ ಬೈಲಹೊಂಗಲ ಉಪವಿಭಾಗಾಧಿಕಾರಿ ಹಾಗೂ ಅರಭಾವಿ ಮತಕ್ಷೇತ್ರದ ಚುನಾವಣಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೆಕ್‍ಪೋಸ್ಟ್‍ಗೆ ಉಪವಿಭಾಗಾಧಿಕಾರಿ ಮತ್ತು ಚುನಾವಣಾಧಿಕಾರಿಗಳ ಭೇಟಿ
ಗೋಕಾಕ ಎ 14 : ತಾಲೂಕಿನ ಘಟಪ್ರಭಾದ ಜೆಜಿಕೋ ಚೆಕ್‍ಪೋಸ್ಟ್‍ಗೆ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಬೈಲಹೊಂಗಲ ಉಪವಿಭಾಗಾಧಿಕಾರಿ ಹಾಗೂ ಅರಭಾವಿ ಮತಕ್ಷೇತ್ರದ ಚುನಾವಣಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಅರಭಾವಿ ಮತಕೇತ್ರದ ಮತಗಟ್ಟೆ ಸಂಖ್ಯೆ 124 ಅರಭಾವಿ ಗ್ರಾಮಕ್ಕೆ ಭೇಟಿ ನೀಡಿ ಮತದಾನದ ಮಹತ್ವ ಹಾಗೂ ಮತದಾನ ಮಾಡುವ ಪ್ರತಿಯೊಬ್ಬರ ಹಕ್ಕು ಮತ್ತು ಜವಾಬ್ದಾರಿ ಎಂದು ಸಾರ್ವಜನಿಕರಿಗೆ ತಿಳಿಸಿದರು.