ಗೋಕಾಕ:ಈಗಿರುವ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಹೋರಾಟ ನಡೆಯಬಾರದು : ನ್ಯಾಯವಾದಿ ವಿಷ್ಣು ಲಾತೂರ
ಈಗಿರುವ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಹೋರಾಟ ನಡೆಯಬಾರದು : ನ್ಯಾಯವಾದಿ ವಿಷ್ಣು ಲಾತೂರ
ಗೋಕಾಕ ಡಿ 8 : ಶುಕ್ರವಾರದಂದು ನಡೆದ ನ್ಯಾಯವಾದಿಗಳ ಸಂಘದ ಸಭೆಯಲ್ಲಿ ನಿರ್ಣಯವಾದಂತೆ ಗೋಕಾಕ ಜಿಲ್ಲೆ ರಚನೆ ಸಂಬಂಧ ಹೋರಾಟದ ನೇತೃತ್ವವನ್ನು ನ್ಯಾಯವಾದಿಗಳ ಸಂಘ ವಹಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಸಂಘದ ಕೆಲ ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ.
ವಕೀಲರ ಸಂಘ ನೇತೃತ್ವ ವಹಿಸಿಕೊಳ್ಳುವುದಾದರೆ ಅದು ಹಿರಿಯ ವಕೀಲರ ನೇತೃತ್ವದಲ್ಲಿ ನಡೆಯಬೇಕು. ಈಗಿರುವ ಸಂಘದ ಅಧ್ಯಕ್ಷರೋರ್ವರು ಪಕ್ಷವೊಂದರ ಪದಾಧಿಕಾರಿಯಾಗಿರುವುದರಿಂದ ಜಿಲ್ಲಾ ಹೋರಾಟ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತದೆ. ಪಕ್ಷಾತೀತವಾಗಿ ನಡೆಯಬೇಕಾದ ಹೋರಾಟ ದಿಕ್ಕು ತಪ್ಪಬಹುದು. ಆದ್ದರಿಂದ ಗೋಕಾಕ ಜಿಲ್ಲಾ ರಚನೆ ಸಂಬಂಧ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ನಡೆಯಬೇಕು. ಈಗಿರುವ ಅಧ್ಯಕ್ಷರ ನೇತೃತ್ವದಲ್ಲಿ ಈ ಹೋರಾಟ ನಡೆಯಬಾರದು. ಕೆಲ ಹೋರಾಟಗಾರರು ವಕೀಲರ ಸಂಘದ ಮೂಲಕ ಜಿಲ್ಲಾ ರಚನೆ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ಸಂಘದ ಮೂಲ ಉದ್ಧೇಶಕ್ಕೆ ಧಕ್ಕೆಯಾಗುತ್ತದೆ ಎಂದು ಸಂಘದ ಸದಸ್ಯ ವಿಷ್ಣು ಲಾತೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.