ಗೋಕಾಕ:ಸೆ 19 ರಂದು 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟ
ಸೆ 19 ರಂದು 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟ
ಗೋಕಾಕ ಸೆ 14: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2024-25 ಸಾಲಿನ ಗೋಕಾಕ ತಾಲೂಕು ಮಟ್ಟದ ಮುಕ್ತ ದಸರಾ ಕ್ರೀಡಾಕೂಟವನ್ನು 19/9/24 ರಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಕ್ರೀಡಾಪಟುಗಳು ಅಂದು ಮುಂಜಾನೆ 9 ಘಂಟೆಗೆ ವರದಿ ಮಾಡಿಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ (ಪುರಷರಿಗಾಗಿ) 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ, 10,000 ಮೀ ಓಟ , ಉದ್ದ ಜಿಗಿತ, ಎತ್ತರ ಜಿಗಿತ್ , ಗುಂಡು ಎಸೆತ, ಥ್ರಿಬಲ್ ಜಂಫ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್, 400×100 ರಿಲೇ, ಹಾಗೂ ಮಹಿಳೆಯರಿಗಾಗಿ 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ ಓಟ,ಉದ್ದ ಜಿಗಿತ, ಎತ್ತರ ಜಿಗಿತ್ , ಗುಂಡು ಎಸೆತ, ಥ್ರಿಬಲ್ ಜಂಫ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್, 400×100 ರಿಲೇ ಮತ್ತು ಮಹಿಳೆ ಮತ್ತು ಪುರುಷರಿಗಾಗಿ ವಾಲಿಬಾಲ್, ಪುಟಬಾಲ್, ಖೋಖೋ, ಕಬ್ಬಡ್ಡಿ, ಥ್ರೋಬಾಲ್ , ಯೋಗ ಆಟಗಳನ್ನು ಆಯೋಜಿಸಲಿಗಿದ್ದು ತಾಲೂಕಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 7019699077 ಹಾಗೂ 7899330871 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.