ಖಾನಾಪುರ:108 ವಾಹನದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯ ಹೆರಿಗೆ : ಖಾನಾಪುರ ಮಾರ್ಗ ಮಧ್ಯ ಘಟನೆ
108 ವಾಹನದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯ ಹೆರಿಗೆ : ಖಾನಾಪುರ ಮಾರ್ಗ ಮಧ್ಯ ಘಟನೆ
ಬೆಳಗಾವಿ ನ 27 : ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಬಾಣಂತಿಯೊಬ್ಬಳು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ೧೦೮ ಆರೋಗ್ಯ ಕವಚವಾಹನದಲ್ಲೆ ಹೆರಿಗೆ ಯಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಮಾಚಿಗಂಡ ಗ್ರಾಮದ ಮಹಿಳೆ ಆಸ್ಪತ್ರೆಗೆ ತೆರಳುವಾಗ ಬಿಜಗರ್ಣೆ -ನಂದಗಡರಸ್ತೆಯ ಮಧ್ಯದಲ್ಲಿ ಕ್ಷೇಮಾ ಎಂಬ ಮಹಿಳೆಗೆ ಹೆರಿಗೆಯಾಗಿದೆ.
ಈ ಗರ್ಭಿಣಿಗೆ ತೀವ್ರ ಹೆರಿಗೆನೋವು
ಉಂಟಾದ ಕಾರಣ ೧೦೮ ಅಲ್ಲಿ ಖಾನಾಪೂರ್ ತಾಲೂಕಾ ಆಸ್ಪತ್ರೆಗೆ ಕರದುಕೊಂಡು ಹೋಗುವಾಗ ನೋವು ಬಂದಿದೆ ಪರಿಣಾಮ ೧೦೮ ಸಿಬಂದಿ ರಸ್ತೆಯ ಮದ್ಯದಲ್ಲಿಯೇ ಹೆರಿಗೆ ಮಾಡಿಸಿಕೊಂಡಿದ್ದು ತಾಯಿ ಕ್ಷೇಮಾ ಮತ್ತು ಮಗು ಆರೋಗ್ಯವಾಗಿದ್ದು. ೧೦೮ ಸಿಬಂದಿಯ ಕೆಲಸಕ್ಕೆ ಗರ್ಭಿಣಿ ಮಹಿಳೆಯ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ