RNI NO. KARKAN/2006/27779|Tuesday, December 30, 2025
You are here: Home » breaking news » ಬೆಳಗಾವಿ: ಮಹಾರಾಷ್ಟ್ರ ಪರ ಘೋಷಣೆ ಕೂಗುವವರು ಅಲ್ಲಿಗೇ ಹೋಗಲಿ : ಸಚಿವ ಬೇಗ್ ಗುಡುಗು

ಬೆಳಗಾವಿ: ಮಹಾರಾಷ್ಟ್ರ ಪರ ಘೋಷಣೆ ಕೂಗುವವರು ಅಲ್ಲಿಗೇ ಹೋಗಲಿ : ಸಚಿವ ಬೇಗ್ ಗುಡುಗು 

ಮಹಾರಾಷ್ಟ್ರ ಪರ ಘೋಷಣೆ ಕೂಗುವವರು ಅಲ್ಲಿಗೇ ಹೋಗಲಿ : ಸಚಿವ ಬೇಗ್ ಗುಡುಗು

 

 

ಬೆಳಗಾವಿ ಮೇ 23: ಕರ್ನಾಟಕದಲ್ಲಿದು ಕೊಂಡು ಮಹಾ ರಾಜ್ಯದ ಪರ ಘೋಷಣೆ ಕೂಗುವವರು ಅಲ್ಲಿಗೆ ಹೋಗಲಿ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಎಂಇಎಸ ವಿರುದ್ಧ ಗುಡುಗಿದ್ದಾರೆ
ಚರಂಡಿ ನೀರು ಸಂಸ್ಕರಣ ಘಟಕಕ್ಕೆ ಸ್ಥಳೀಯ ರೈತರು ವಿರೋಧ ಮಾಡಿದ ಹಿನ್ನೆಲೆ ಸಂಸ್ಕರಣಾ ಘಟಕಕ್ಕೆ ಗುರುತಿಸಿರುವ ಸ್ಥಳಕ್ಕೆ ಸಚಿವ ರೋಷನ್‌ ಬೇಗ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಜಿ.ಪಂ ಸದಸ್ಯೆ ಸರಸ್ವತಿ ಪಾಟೀಲರಿಂದ ಜೈಕಾರ ಹಾಕಿದ ವಿಡಿಯೋದಲ್ಲಿನ ಹೇಳಿಕೆ ಬಗ್ಗೆ ಗರಂ ಆದರು. 

ಘಟಕ ನಿರ್ಮಾಣದ ಬಗ್ಗೆ ಎದ್ದಿರುವ ವಿರೋಧದ ಬಗ್ಗೆ ರೈತರಿಂದ ಮಾಹಿತಿ ಪಡೆದ ಸಚಿವ ಬೇಗ್, ರೈತರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ರು. ಈ ಸಂದರ್ಭದಲ್ಲಿ ಸಚಿವರಿಗೆ ಶಾಸಕ ಸಂಜಯ್‌ ಪಾಟೀಲ್‌ ಸಾಥ್ ನೀಡಿದ್ರು.

Related posts: