RNI NO. KARKAN/2006/27779|Thursday, April 25, 2024
You are here: Home » breaking news » ನೇಗಿನಹಾಳ : ನೇಗಿನಹಾಳ ಕ್ವಾರಂಟೈನ್ ಕೇಂದ್ರಕ್ಕೆ ತಾಲೂಕಾ ಹಿರಿಯ ಮುಖ್ಯ ನ್ಯಾಯಾಧೀಶರಾದ ಉಷಾರಾಣಿ ಆರ್ ಬೇಟಿ

ನೇಗಿನಹಾಳ : ನೇಗಿನಹಾಳ ಕ್ವಾರಂಟೈನ್ ಕೇಂದ್ರಕ್ಕೆ ತಾಲೂಕಾ ಹಿರಿಯ ಮುಖ್ಯ ನ್ಯಾಯಾಧೀಶರಾದ ಉಷಾರಾಣಿ ಆರ್ ಬೇಟಿ 

ನೇಗಿನಹಾಳ ಕ್ವಾರಂಟೈನ್ ಕೇಂದ್ರಕ್ಕೆ ತಾಲೂಕಾ ಹಿರಿಯ ಮುಖ್ಯ ನ್ಯಾಯಾಧೀಶರಾದ ಉಷಾರಾಣಿ ಆರ್ ಬೇಟಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ನೇಗಿನಹಾಳ ಜೂ 22 :

 

 

ಕ್ವಾರಂಟೈನ್ ಕೇಂದ್ರದಲ್ಲಿರುವ ಮೂಲಭೂತ ಸೌಲಭ್ಯಗಳ ಪರಿಶೀಲನೆ, ಸ್ವಚತೆ ಹಾಗೂ ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿಗಳಿಗೆ ಸಾಮಾಜಿಕ ಅಂತರ ಕುರಿತು ಬೈಲಹೊಂಗಲ ತಾಲೂಕಾ ಹಿರಿಯ ದಂಡಾಧಿಕಾರಿ ಮುಖ್ಯ ನ್ಯಾಯಾಧೀಶರಾದ ಉಷಾರಾಣಿ ಆರ್ ತಿಳುವಳಿಕೆ ನೀಡಿದರು.

ಗ್ರಾಮದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಕೊವಿಂಡ್ 19 ಕ್ವಾರಂಟೈನ್ ಕೇಂದ್ರಕ್ಕೆ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಜೊತೆ ಚರ್ಚಿಸಿ ಮಾತನಾಡಿದ ಅವರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಪ್ರತಿಯೊಬ್ಬರು ಕನಿಷ್ಠ ಒಂದು ಮೀಟರ್ ಅಂತರದಲ್ಲಿ ಒಡಾಡುವುದು, ಮಲಗಿಕೊಳ್ಳುವುದರಿಂದ ಕೊರೊನಾ ವೈರಸ್ ಹಾವಳಯಿಂದ ಜನರು ದೂರವಿರಲು ಸಾಧ್ಯವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬೈಲಹೊಂಗಲ ಹೆಚ್ಚುವರಿ ದಂಡಾಧಿಕಾರಿಗಳು, ಸೌಭಾಗ್ಯ ಗೋಷರ್, ತಾಲೂಕಾ ವೈದ್ಯಾಧಿಕಾರಿ ಡಾ. ಎಸ್.ಎಸ್ ಸಿದ್ಧಣ್ಣವರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ನೇಗಿನಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹಾಂತೇಶ ಹಿರೇಮಠ, ಬಿ.ಎಚ್.ಇ ಎಸ್.ಎಸ್ ಮುತ್ನಾಳ, ನಾಗರಾಜ ಕಾಡೆ, ಗಂಗಪ್ಪ ಕಲ್ಲೋಳ್ಳಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಎಚ್, ನೇಗಿನಹಾಳ ವಸತಿ ನಿಲಯ ಮೇಲ್ವಿಚಾರಕ ಮಲ್ಲನಗೌಡ ಪಾಟೀಲ, ಪೆÇೀಲಿಸ್ ಪೇದೆ ನಿಂಗಣ್ಣಾ ಮಂಗಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಮತ್ತಿತ್ತರರು ಉಪಸ್ಥಿತರಿದ್ದರು.

Related posts: