RNI NO. KARKAN/2006/27779|Tuesday, October 22, 2024
You are here: Home » breaking news » ಗೋಕಾಕ:ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ : ಸಚಿವ ರಮೇಶ

ಗೋಕಾಕ:ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ : ಸಚಿವ ರಮೇಶ 

ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ : ಸಚಿವ ರಮೇಶ

 

ಗೋಕಾಕ ನ 25: ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗ ಪಡಿಸಿಕೊಂಡು ಹಿಂದುಳಿದ ಸಮಾಜಗಳ ಮಕ್ಕಳು ವಿದ್ಯಾವಂತರಾಗಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರದಂದು ನಗರದ ಆಶ್ರಯ ಬಡಾವಣೆ ಪಕ್ಕದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಅಲೆಮಾರಿ-ಅರೆ ಅಲೆಮಾರಿ ಜನಾಂಗದ ಮಕ್ಕಳ ಆಶ್ರಮ ಶಾಲೆ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡುತ್ತಿದ್ದರು.
ಹಿಂದುಳಿದ ವರ್ಗಗಳ ಜನರು ತಮ್ಮ ಮಕ್ಕಳಿಗೆ ಒಳ್ಳೇ ವಿದ್ಯಾಭ್ಯಾಸ ಕೊಡಿಸಬೇಕು. ಅದರಿಂದ ಜಾಗೃತಿ ಉಂಟಾಗಿ ಸಮಾಜದ ಅಭಿವೃದ್ಧಿ ಆಗುವದು ನಿಶ್ಚಿತ ಎಂದರು.
ಜಿ.ಪಂ. ಸದಸ್ಯರಾದ ಟಿ.ಆರ್.ಕಾಗಲ್ ಮತ್ತು ಮಡ್ಡೆಪ್ಪ ತೋಳಿನವರ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಮಾಜಿ ನಗರಾದ್ಯಕ್ಷ ಎಸ್.ಎ.ಕೊತವಾಲ, ನಗರಸಭೆ ಸದಸ್ಯ ರಮೇಶ ಜುಪ್ರಿ, ಅಲೆಮಾರಿ-ಅರೆ ಅಲೆಮಾರಿ ಹಾಗೂ ಬುಡಕಟ್ಟು ಜನಾಂಗದ ಜಿಲ್ಲಾಧ್ಯಕ್ಷ ಅಮೃತ ದಪ್ಪಿನವರ, ಮುಖಂಡರಾದ ಎಮ್.ಬಿ.ಸಾಯನ್ನವರ, ಶಿವಾನಂದ ಹತ್ತಿ, ಸಂಗಮೇಶ ಪರುಶೆಟ್ಟಿ, ಸಾಗರ ಕುಂಬಾರ, ಮಹಾಂತೇಶ ದಪ್ಪಿನವರ, ಎಮ್.ಎಮ್.ಅಂಕಲಗಿ, ಗುರು ತಾಳಿಕೋಟೆ, ರವಿ ದಪ್ಪಿನವರ, ಯಲ್ಲಪ್ಪ ನಂದಿ, ಅಶೋಕ ಗೋಣಿ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಆರ್.ಕೆ.ಬಿಸಿರೊಟ್ಟಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎ.ಬಿ.ಹೊನ್ನಾವರ, ಗುತ್ತಿಗೆದಾರ ಸಿದ್ದು ಪಾತ್ರೂಟ ಸೇರಿದಂತೆ ಅನೇಕರು ಇದ್ದರು.

 

Related posts: