ಬೈಲಹೊಂಗಲ:ಕೃಷಿ ಅಭಿಯಾನ ರಥಕ್ಕೆ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲರಿಂದ ಚಾಲನೆ
ಕೃಷಿ ಅಭಿಯಾನ ರಥಕ್ಕೆ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲರಿಂದ ಚಾಲನೆ
ಬೈಲಹೊಂಗಲ ನ 25: ಕೃಷಿ ಇಲಾಖೆಯು ರೈತರಿಗೆ ಬೇಕಾಗುವಂತಹ ಸಮಗ್ರ ಕೃಷಿ ಮಾಹಿತಿಯನ್ನು ರೈತರ ಬಾಗಿಲಿಗೆ ಬಂದು ತಲುಪಿಸುವ ಕಾರ್ಯ ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಪಗಾವಿ ಜಿಲ್ಲಾ ಪಂಚಾಯತ್ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.
ನೇಗಿನಹಾಳ ಗ್ರಾಮ ಪಂಚಾಯತಿಯ ಆವರಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಹಂಗಾಮಿನ ಸಮಗ್ರ ಕೃಷಿ ಅಭಿಯಾನದ ಜಾಗೃತಿ ಮೂಡಿಸುವ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ನೇಸರಗಿ ಹೋಬಳಿಯ ಎಲ್ಲ ಗ್ರಾ.ಪಂ ವ್ಯಾಪ್ತಿಯಲ್ಲಿ ಎರಡು ದಿನ ಕೃಷಿ ಮಾಹಿತಿ ವ್ಯಾಪಕ ಪ್ರಚಾರ ಮಾಡಿ ಯೋಜನೆಗಳನ್ನು ರೈತರ ಮನೆಮುಟ್ಟಿಸಬೇಕೆಂದು ಸಲಹೆ ನೀಡಿದರು. ನೇಸರಗಿ ವಲಯದ ಕೃಷಿ ಅಧಿಕಾರಿ ಆರ್ ಆಯ್ ಕುಂಬಾರ ಮಾತನಾಡಿ ಇಲಾಖೆಯ ಕೃಷಿಭಾಗ್ಯ, ಸಾವಯವ ಕೃಷಿ, ಹಿಂಗಾರುಬೆಳೆ, ಮುಂಗಾರುಬೆಳೆ, ಮಿಶ್ರಬೆಳೆ, ಸಿರಿದಾನ್ಯ ಬೆಳೆ, ಮಣ್ಣಿನ ಆರೋಗ್ಯ ಅಭಿಯಾನ, ಕಬ್ಬಿನ ರವದಿ ರಕ್ಷಣೆ ಮತ್ತು ಉಪಯೋಗ, ಹಿಂಗಾರು ಬೆಳೆಗಳಲ್ಲಿ ಕೀಟ ರೋಗಗಳ ಸಮಗ್ರ ಹತೋಟಿ ಕ್ರಮಗಳು ಹಾಗೂ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.
ಆತ್ಮಸಂಯೋಜನೆ ತಾಂತ್ರಿಕ ವ್ಯವಸ್ಥಾಪಕ ರವಿ ಪಾಟೀಲ, ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಗ್ರಾ.ಪಂ ಅದ್ಯಕ್ಷೆ ಸುವರ್ಣಾ ಕಾರಿಮನಿ, ಉಪಾದ್ಯಕ್ಷ ಮಹಾದೇವಪ್ಪ ನರಸಣ್ಣವರ, ಸಹಾಯಕ ಕೃಷಿ ಅಧಿಕಾರಿ ಜೆ.ಎಸ್ ಅರಳಿಕಟ್ಟಿ, ಸದಸ್ಯರಾದ ರವಿ ಜುಂಜರಿ, ಉದಯ ಖನಗಾಂವಿ, ಮಲ್ಲಮ್ಮ ಉಳವಿ, ಕಲ್ಲವ್ವ ಹತ್ತಿ ಸುತ್ತಮೂತ್ತಲಿನ ಗ್ರಾಮದ ರೈತಭಾಂದವರು ಉಪಸ್ಥಿತರಿದ್ದರು. ರವಿ ಪಾಟೀಲ ಸ್ವಾಗತಿಸಿದರು, ರೇಣುಕಾ ಪಾಟೀಲ ವಂದಿಸಿದರು.