RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಶಿಕ್ಷಕರು ಮುಂದಾಗಬೇಕು : ಪ್ರೊ. ಶಂಕರ ನಿಂಗನೂರ

ಗೋಕಾಕ:ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಶಿಕ್ಷಕರು ಮುಂದಾಗಬೇಕು : ಪ್ರೊ. ಶಂಕರ ನಿಂಗನೂರ 

ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಶಿಕ್ಷಕರು ಮುಂದಾಗಬೇಕು : ಪ್ರೊ. ಶಂಕರ ನಿಂಗನೂರ
ಗೋಕಾಕ ನ 20 : ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಪಾಲಕರು ಹಾಗೂ ಶಿಕ್ಷಕರು ಮಾಡಬೇಕು. ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳನ್ನು ಗುರುತಿಸಲು ಇಂತಹ ಸ್ಪರ್ಧೆಗಳು ಅವಶ್ಯಕ ಎಂದು ಎಸ್.ಆರ.ಇ.ಎಸ್. ಪ್ರಥಮ ದರ್ಜೆ ಮಹಾವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ಎಂ. ನಿಂಗನೂರ ನುಡಿದರು.
ಇವರು ಕಲ್ಲೋಳಿಯ ಎಸ್.ಆರ್.ಇ. ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವೇಷಭೂಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ ಮಗುವಿನ ಬೆಳವಣಿಗೆಯಲ್ಲಿ ಮನೆಯ ಪರಿಸರ, ತಾಯಿ ತಂದೆಗಳ ನಡವಳಿಕೆ ಮಹತ್ವವಾಗಿರುತ್ತದೆ. ಛಲ, ಗುರಿ, ಪ್ರಯತ್ನದ ದಾರಿಯನ್ನು ಶಿಕ್ಷಕರು ಮಕ್ಕಳಲ್ಲಿ ತುಂಬುವ ಮೂಲಕ ಅವರಿಗೆ ದಾರಿದೀಪವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್.ಇ. ಸಂಸ್ಥೆಯ ಚೇರಮನ್ನರಾದ ಶ್ರೀ ಬಸಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ನಮ್ಮ ಆಡಳಿತ ಮಂಡಳಿ ಸಿದ್ಧವಿದೆ. ಎಲ್ಲ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಜವಾಬ್ದಾರಿ ಪಾಲಕ ಹಾಗೂ ಶಿಕ್ಷಕರ ಮೇಲಿದೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಂಗೀತ ಕುರ್ಚಿ: ಸೌಭಾಗ್ಯ ದೇವನಗಾವಿ (ಪ್ರಥಮ), ಸಾಕ್ಷೀ ಹೆಬ್ಬಾಳ(ದ್ವಿತೀಯ), ಶ್ರೇಯಸ್ ಎಮ್ಮಿ(ತೃತೀಯ).
ಸ್ಪೇಲಿಂಗ್ ಕಾಂಫಿಟೇಶನ್ ವಿಭಾಗದಲಿ:್ಲ ಲಕ್ಷ್ಮೀ ಕುರಬೇಟ ಹಾಗೂ ತಂಡ(ಪ್ರಥಮ), ಚಿನ್ಮಯ ಖಾನಗೌಡ್ರ (ದ್ವಿತೀಯ), ಐಶ್ವರ್ಯ ಹಾಗೂ ತಂಡ(ತೃತೀಯ).
ವೇಷಭೂಷಣ ಸ್ಪರ್ಧೆ: ಎಲ್.ಕೆ.ಜಿ ವಿಭಾಗ ಆದರ್ಶ ಸಂಸುದ್ಧಿ (ಪ್ರಥಮಸ್ಥಾನ),ಭೀಮಶಿ ಖಾನಗೌಡ್ರ (ದ್ವಿತೀಯ), ವೈಷ್ಣವಿ ಹುಲ್ಲೋಳಿ (ತೃತೀಯ).
ಯು.ಕೆ.ಜಿ ವಿಭಾಗದಲ್ಲಿ ಬವಾನಿ ಹಲಕಿ (ಪ್ರಥಮ), ಲಕ್ಷ್ಮೀ ಚಿಕ್ಕೋಡಿ (ದ್ವಿತೀಯ), ವಿನಾಯಕ ಮಠದ (ತೃತೀಯ).
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಸಾತಪ್ಪ ಖಾನಾಪೂರ, ಮುಖ್ಯೋಪಾಧ್ಯಾಯ ರಾಜು ಉಪ್ಪಾರ, ಶಿಕ್ಷಕಿ ಶ್ರೀಮತಿ ಜಯಶ್ರೀ ಪಾಟೀಲ, ವಿದ್ಯಾ ಬಡಿಗೇರ,ಶಾಂತಾ ಕಲಾಲ, ಸಿಪಾಯಿಗಳಾದ ಕಾಳಮ್ಮ ಬಡಿಗೇರ, ದೇವಕಿ, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.
ಶ್ರೀಮತಿ ವಿಜಯಲಕ್ಷ್ಮೀ ಹಿರೇಮಠ ಪ್ರಾರ್ಥಿಸಿದರು, ಪ್ರಧಾನ ಗುರುಮಾತೆ ಶ್ರೀಮತಿ ಎಸ್.ಬಿ. ಪೂಜಾರ ಸ್ವಾಗತಿಸಿದರು, ಕುಮಾರಿ ಶ್ವೇತಾ ಪತ್ತಾರ ವಂದಿಸಿದರು

Related posts: