ಗೋಕಾಕ:ಸಡಗರದ – ಸಂಭ್ರಮದಿಂದ ರಮಜಾನ ಹಬ್ಬ ಆಚರಣೆ

ಸಡಗರದ – ಸಂಭ್ರಮದಿಂದ ರಮಜಾನ ಹಬ್ಬ ಆಚರಣೆ
ಗೋಕಾಕ ಮಾ 21 : ಕಳೆದ ಒಂದು ತಿಂಗಳನಿಂದ ಉಪವಾಸ ಆಚರಿಸುತ್ತಿದ್ದ ಮುಸ್ಲಿಂ ಭಾಂಧವರು ಶನಿವಾರದಂದು ರಮಜಾನ ಹಬ್ಬವನ್ನು ಸಡಗರದೊಂದಿಗೆ ಆಚರಿಸಿ, ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ಅಬ್ದುಲ್ ಕಲಾಂ ಕಾಲೇಜಿನ ಈದ್ಗಾ ಮೈದಾನ ಹಾಗೂ ನಗರದ ಇತರ ಮಸೀದಿಗಳಲ್ಲಿ ಶನಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬಕ್ಕೆ ತೆರೆ ಎಳೆದರು.
ಮೌಲಾನಾ ತಲಹಾಸಾಬ ಕಟಹಾರಿ ರಂಜಾನ್ ಆಚರಣೆ ಕುರಿತು ಉಪದೇಶ ನೀಡಿದರು. ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಒಂದು ತಿಂಗಳು ಉಪವಾಸ ಆಚರಿಸಿದ ಬಳಿಕ ಜಕಾತ್, ಫಿತ್ರಾ ದಾನ ಮಾಡಿದರು.ಈ ವೇಳೆ ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು.
ಈ ಸಂದರ್ಭದಲ್ಲಿ ಅಮೀರಸಾಬ ಹಾಜಿ ಕುತುಬುದ್ದೀನ ಬಸ್ಸಾಪೂರ, ನಗರಸಭೆ ಮಾಜಿ ಸದಸ್ಯರುಗಳಾದ ಅಬ್ಬಾಸ ದೇಸಾಯಿ,ಕುತಬ್ಬುದ್ದೀನ ಗೋಕಾಕ ಸೇರಿದಂತೆ ಸಾವಿರಾರು ಮುಸ್ಲಿಂ ಭಾಂಧವರು ಉಪಸ್ಥಿತರಿದ್ದರು.
