RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಪತ್ರಿಕೆಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ : ವಿದ್ಯಾರ್ಥಿನಿ ವಿದ್ಯಾ ಪತ್ತಾರ

ಗೋಕಾಕ:ಪತ್ರಿಕೆಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ : ವಿದ್ಯಾರ್ಥಿನಿ ವಿದ್ಯಾ ಪತ್ತಾರ 

ಪತ್ರಿಕೆಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ : ವಿದ್ಯಾರ್ಥಿನಿ ವಿದ್ಯಾ ಪತ್ತಾರ

ಗೋಕಾಕ ನ 14: ಪತ್ರಿಕೆಗಳು ಇಂದು ಎಲ್ಲ ಕ್ಷೇತ್ರದ ಮಾಹಿತಿಗಳನ್ನು ಜನರಿಗೆ ತಲುಪಿಸುವದರೊಂದಿಗೆ ಜನರ ಜೀವನದ ಅವಿಭಾಜ್ಯ ಅಂಗಗಳಾಗಿವೆ ಎಂದು ನಗರದ ಮಯೂರ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ವಿದ್ಯಾ ಪತ್ತಾರ ಹೇಳಿದರು.

ಅವರು ಮಂಗಳವಾರದಂದು ಇಲ್ಲಿಯ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಿಕೆಗಳ ಉಡುಪು ಧರಿಸಿ ಅವುಗಳ ಮಹತ್ವವನ್ನು ವಿವರಿಸುತ್ತಾ ಎಲ್ಲ ವರ್ಗದ ಜನರಿಗೂ ಅವಶ್ಯಕವಾದ ಮಾಹಿತಿ ಹಾಗೂ ಜ್ಞಾನವನ್ನು ನೀಡುವುದರೊಂದಿಗೆ ಮಹತ್ವದ ಸ್ಥಾನ ಪತ್ರಿಕೆಗಳು ಪಡೆದಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಆರ್.ಮಹೇಂದ್ರಕರ, ಹಿರಿಯ ಶಿಕ್ಷಕ ಎಂ.ಸಿ.ವಣ್ಣೂರ, ಶಿಕ್ಷಕಿಯರಾದ ಸ್ಮೀತಾ ಸುಣಧೋಳಿ, ವಿ.ಡಿ.ದೊಡಮನಿ, ಸ್ಮೀತಾ ಭಂಡಾರಿ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.

Related posts: