RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಸತೀಶ ಶುರ್ಗಸ ಅವಾರ್ಡ್ಸ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ : ಕುಮಾರಿ ಐಶ್ವರ್ಯ ಕೊಡ್ಲಿ

ಗೋಕಾಕ:ಸತೀಶ ಶುರ್ಗಸ ಅವಾರ್ಡ್ಸ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ : ಕುಮಾರಿ ಐಶ್ವರ್ಯ ಕೊಡ್ಲಿ 

ಸತೀಶ ಶುರ್ಗಸ ಅವಾರ್ಡ್ಸ ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ : ಕುಮಾರಿ ಐಶ್ವರ್ಯ ಕೊಡ್ಲಿ

ಗೋಕಾಕ ಜ 16 : ಸತೀಶ ಶುರ್ಗಸ ಅವಾರ್ಡ್ಸ ಕೇವಲ ಒಂದು ವೇದಿಕೆ ಅಲ್ಲ, ಸಂಸ್ಕೃತಿ, ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಕಳೆದ ಸಾಲಿನ ಸತೀಶ್ ಶುರ್ಗರ್ಸ ಅವಾರ್ಡ್ಸ ಭಾಷಣ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ಕೊಡ್ಲಿ ಹೇಳಿದಳು .

ಶುಕ್ರವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಹಮ್ಮಿಕೊಂಡ 22ನೇ ಸತೀಶ್ ಶುರ್ಗರ್ಸ ಆವಾರ್ಡ್ಸ ಕಾರ್ಯಕ್ರಮನ್ನು ಉದ್ಘಾಟಿಸಿ ಅವಳು ಮಾತನಾಡಿದರು.

ಕಳೆದ 22 ವರ್ಷಗಳಿಂದ ಈ ಭವ್ಯ ಕಾರ್ಯಕ್ರಮ ಜನರ ಮನ,ಮನಗಳಲ್ಲಿ ಮನೆ ಮಾಡಿದೆ. ಸಹಸ್ರಾರು ವಿದ್ಯಾರ್ಥಿಗಳ ದಾರಿ ದೀಪವಾಗಿದೆ. ಇದು ಪ್ರತಿಭೆಯ ಸಂಭ್ರಮವಾಗಿದೆ. ಎಲೆಮರೆ ಕಾಯಿಯಂತೆ ಇರುವ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಅವಳು ಸತೀಶ ಶುಗರ್ಸ ಅವಾರ್ಡ್ಸ ಕಾರ್ಯಕ್ರಮ ಸಾಂಸ್ಕೃತಿಕ ಸಂಭ್ರಮ ಆಗಲಾರದೆ ಹಲವಾರು ವಿದ್ಯಾರ್ಥಿಗಳ ಕನಸುಗಳಿಗೆ ದಾರಿದೀಪವಾಗಿದೆ.
ಪ್ರತಿಯೊಬ್ಬರ ಕಲಾವಿದರ ಕನಸು ಈ ವೇದಿಕೆಯಿಂದ ಸಹಕಾರವಾಗಲಿ ಎಂದು ಐಶ್ವರ್ಯ ಹಾರೈಸಿದಳು.

ತಹಶೀಲ್ದಾರ ಡಾ.ಮೋಹನ ಭಸ್ಮೆ ಮಾತನಾಡಿ ಸತೀಶ ಶುಗರ್ಸ ಅವಾರ್ಡ್ಸ ವಿದ್ಯಾರ್ಥಿಗಳಿಗೆ ಶಕ್ತಿ ತೋರುತ್ತಿದೆ. ಇದು ಸರ್ವ ಸಾಂಸ್ಕೃತಿಕ ಅಭಿಯಾನವಾಗಿ ನಾಡಿನಲ್ಲಿ ಪಸರಿಸಿದೆ. ಪಾಲಕರು ತಮ್ಮ ಮಕ್ಕಳಿಗೆ ಈ ವೇದಿಕೆಯಿಂದ ವಂಚಿತವಾಗದಂತೆ ನೋಡಿಕೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮಹನೀಯರಿಗೆ ಸತ್ಕರಿಸಿ, ಗೌರವಿಸಲಾಯಿತು.

ನಂತರ ಪ್ರಾಢಶಾಲಾ ವಿಭಾಗದ ಜಾನಪದ ಗಾಯನ, ಪ್ರಾಥಮಿಕ ವಿಭಾಗದ ಗಾಯನ,ಪ್ರಾಥಮಿಕ ಶಾಲಾ ವಿಭಾಗದ ಸಮೂಹ ನೃತ್ಯ ಹಾಗೂ ಕಾಲೇಜು ವಿಭಾಗದ ಸಮೂಹ ನೃತ್ಯಗಳು ಜರುಗಿದವು.

ಈ ಸಂದರ್ಭದಲ್ಲಿ ಬಿಇಓ ಪ್ರಕಾಶ ಹಿರೇಮಠ, ಡಿ.ವಾಯ.ಎಸ್.ಪಿ ರವಿ ನಾಯಿಕ, ಸಿಪಿಐಗಳಾದ ಸುರೇಶಬಾಬು, ಶ್ರೀಶೈಲ ಬ್ಯಾಕೂಡ, ಪ್ರಾಚಾರ್ಯ ಪ್ರಕಾಶ್ ಲಕ್ಷಟ್ಟಿ, ರಿಯಾಜ ಚೌಗಲಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿ, ವಂದಿಸಿದರು

Related posts: