ಗೋಕಾಕ:ಶೈಕ್ಷಣಿಕ ಪ್ರಗತಿಯಲ್ಲಿ ಗೋಕಾಕ ನಗರ 2ನೇ ಸ್ಥಾನದಲ್ಲಿದೆ : ಸಚಿವ ಸತೀಶ

ಶೈಕ್ಷಣಿಕ ಪ್ರಗತಿಯಲ್ಲಿ ಗೋಕಾಕ ನಗರ 2ನೇ ಸ್ಥಾನದಲ್ಲಿದೆ : ಸಚಿವ ಸತೀಶ
ಗೋಕಾಕ ಡಿ 23 : ಶೈಕ್ಷಣಿಕ ಪ್ರಗತಿಯಲ್ಲಿ ಗೋಕಾಕ ನಗರದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಬೆಳಗಾವಿಯ ನಂತರದ ಸ್ಥಾನದಲ್ಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ನಗರದ ಆಕ್ಸಪರ್ಡ ಶಾಲೆಯ 12ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಾರ್ಷಿಕೋತ್ಸವವು ಶಿಕ್ಷಣ, ಕ್ರೀಡೆ ಹಾಗೂ ಇತರೆ ಚಟುವಟಿಕೆಗಳ ಮೌಲ್ಯ ಮಾಪನ ಕಾರ್ಯಕ್ರಮವಾಗಿದೆ. ಮಕ್ಕಳು ಇಂತಹ ವೇದಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರತಿಭಾವಂತರಾಗಿರಿ. ಈ ಶಾಲೆ 12ವರ್ಷದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದು, ನಾವು ನೀವೆಲ್ಲರೂ ಸಹಕಾರ ನೀಡೋಣ ಎಂದು ಹೇಳಿದರು.
ವೇದಿಕೆಯಲ್ಲಿ ಡಾ.ಬಿ.ಬಿ.ಘೋಡಗೇರಿ, ದಿಲೀಪ್ ಮಜಲಿಕರ, ರಿಯಾಜ ಚೌಗಲಾ, ಧಾರವಾಡದ ಶಿಕ್ಷಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ವಾಯ್.ಭಜಂತ್ರಿ, ಶಾಲೆಯ ಕಾರ್ಯದರ್ಶಿ ಎ.ಎಸ್.ಭಜಂತ್ರಿ, ಮುಖ್ಯೋಪಾಧ್ಯಾಯನಿ ಜೆ.ಎ.ಭಜಂತ್ರಿ ಉಪಸ್ಥಿತರಿದ್ದರು.
