ಬೆಳಗಾವಿ:ನನ್ನನ್ನು ಯಾರು ಅಳಗಾಡಿಸಲು ಆಗುವುದಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ನನ್ನನ್ನು ಯಾರು ಅಳಗಾಡಿಸಲು ಆಗುವುದಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ ಡಿ 19 : ನನ್ನನ್ನು ಯಾರು ಅಳಗಾಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರದಂದು ವಿಧಾನ ಪರಿಷತ್ತಿನ (ಕೊನೆಯ ದಿನ) ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದ ಮೈಕ್ ಬಂದ ಆದಾಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಮುಖ್ಯಮಂತ್ರಿ ಅವರೇ ನಿಮ್ಮ ಹಾಗೆ ನಿಮ್ಮ ಮೈಕ್ ಕೂಡಾ ಯಾಕೋ ಅಳಗಾಡುತ್ತಿದೆ ಎಂದಾಗ ಸಿ.ಟಿ.ರವಿ, ಎನ್.ರವಿ ಕುಮಾರ್, ಕೇಶವ ಸೇರಿದಂತೆ ಅನೇಕ ಸದಸ್ಯರು ನಿಮ್ಮವರೇ ನಿಮ್ಮ ಖುರ್ಚಿ ಅಳಗಾಡಿಸುತ್ತಿದ್ದಾರೆ ಎಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಲಿನಂತೆ ಖಡಕ್ ಆಗಿ ಉತ್ತರಿಸಿ ಬಿಜೆಪಿ ಅವರು ಎಷ್ಟೇ ಹುಳಿಹಿಂಡಲು ಪ್ರಯತ್ನ ಮಾಡಿದರು ನಾವು ಅಳಗಾಡುವುದಿಲ್ಲ 2028ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಗಟ್ಟಿಯಾಗಿ ಪರಿಷತ್ತಿನಲ್ಲಿ ಹೇಳಿದರು.
