ಬೆಟಗೇರಿ:ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ರೈತರ ಮುಖದಲ್ಲಿ ಮಂದಹಾಸ
ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ರೈತರ ಮುಖದಲ್ಲಿ ಮಂದಹಾಸ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜೂ 1 :
ಗ್ರಾಮದಲ್ಲಿ ರವಿವಾರ ಮಧ್ಯಾಹ್ನ ಮತ್ತು ಸೋಮವಾರ ಸಾಯಂಕಾಲ 4 ಗಂಟೆಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ಭೂಮಿ ತಂಪಾಗಿಸಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಪ್ರಸಕ್ತ ಮುಂಗಾರು ಮಳೆ ಆಗಾದೆ ರೈತರು ಹಾಗೂ ಜನಸಾಮಾನ್ಯರಲ್ಲಿ ಮಳೆಯಾಗುವ ಲಕ್ಷಣ ಗೋಚರಿಸದೆ ಆತಂಕ ಮೂಡಿಸಿತ್ತು. ಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಕೆಲವು ಹಳ್ಳಿಗಳಲ್ಲಿ ದಿನ ಬೆಳಗಾದರೆ ರೈತರು, ವೃದ್ಧರು ಆಕಾಶದತ್ತ ಮುಖ ಮಾಡಿ ಮಳೆಯ ನಿರೀಕ್ಷೆಯಲ್ಲಿ ಹಗಲಿರುಳು ಕಾಲ ಕಳೆಯುತ್ತಿದ್ದ ಇಲ್ಲಿಯ ರೈತರು ರವಿವಾರ ಸಾಯಂಕಾಲ ಬಂದ ಮಳೆ ಭೂಮಿ ತಂಪಾಗಿಸಿದ್ದರಿಂದ ಜನರು ನಿಟ್ಟಿಸಿರುಬಿಡುವಂತಾಗಿದೆ.