ಗೋಕಾಕ:ಭೋವಿವಡ್ಡರ ಸಮಾಜಕ್ಕೆ ಪ್ರತ್ಯೇಕ ಒಳಮಿಸಲಾತಿ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಭೋವಿವಡ್ಡರ ಸಮಾಜಕ್ಕೆ ಪ್ರತ್ಯೇಕ ಒಳಮಿಸಲಾತಿ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ
ಗೋಕಾಕ ಸೆ 15 : ಭೋವಿವಡ್ಡರ ಸಮಾಜಕ್ಕೆ 5% ಒಳ ಮಿಸಲಾತಿಯನ್ನು ನೀಡಿದ್ದು, ಅನ್ಯಾಯವಾಗಿರುತ್ತದೆ. ನಮ್ಮ ಸಮಾಜಕ್ಕೆ ಒಳಮಿಸಲಾತಿಯನ್ನು ಪ್ರತ್ಯೇಕವಾಗಿ ನೀಡಬೇಕೆಂದು ಆಗ್ರಹಿಸಿ ಗೋಕಾಕ ತಾಲೂಕು ಭೋವಿ ಸೋಶಿಯಲ್ ವೆಲ್ ಫೇರ ಸೊಸೈಟಿ ವತಿಯಿಂದ ಸೋಮವಾರದಂದು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಭೋವಿವಡ್ಡರ ಸಮಾಜವು ದೊಡ್ಡ ಸಮಾಜವಾಗಿದ್ದು, ಅದರಲ್ಲಿ 101 ಹಿಂದುಳಿದ ಜಾತಿಗಳಿದ್ದು, ಅದರಲ್ಲಿ 63 ಜಾತಿಗಳು ಸೇರಿ 5% ಒಳಮಿಸಲಾತಿ ನೀಡಿದ್ದು ತೀರ ಅನ್ಯಾಯವಾಗಿರುತ್ತದೆ. ಈ ಸಮಾಜಕ್ಕೆ ಪ್ರತ್ಯೇಕ ಒಳಮಿಸಲಾತಿಯನ್ನು ಘೋಷಿಸಬೇಕು. ಈ ಆದೇಶವನ್ನು ಪನರ್ ಪರಿಶೀಲಿಸಿ ಸಮಾಜಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಸದರಿ ಈ ಒಳಮಿಸಲಾತಿಯನ್ನು ರದ್ದು ಪಡಿಸಬೇಕು. ರದ್ದು ಪಡಿಸದೆ ಇದ್ದಲಿ ನಮ್ಮ ರಾಜ್ಯದ ಎಲ್ಲಾ ಭೋವಿವಡ್ಡರ ಸಮಾಜದ ಜನರು ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಭರಮಣ್ಣ ಗಾಡಿವಡ್ಡರ, ಎಲ್ ಜಿ.ಗಾಡಿವಡ್ಡರ, ಗೋವಿಂದ ಗಾಡಿವಡ್ಡರ, ಹನುಮಂತ ಮನುವಡ್ಡರ, ಮೋಹನ ಮನುವಡ್ಡರ, ಕೆಂಪಣ್ಣ ಮನುವಡ್ಡರ, ಶೆಟೆಪ್ಪ ಮನುವಡ್ಡರ, ಪರಶುರಾಮ ಗಾಡಿವಡ್ಡರ, ಆನಂದ ಮನುವಡ್ಡರ, ಪವನ ಮಹಾಲಿಂಗಪೂರ ಇದ್ದರು.
