RNI NO. KARKAN/2006/27779|Saturday, August 30, 2025
You are here: Home » breaking news » ಗೋಕಾಕ:ಬಸವಣ್ಣನವರ ವಚನಗಳನ್ನು ಶರಣ ಸಾಹಿತ್ಯವು ಸಮಸ್ತ ಲೋಕಕ್ಕೆ ಉಣಬಡಿಸಿದೆ : ಶ್ರೀ ಮಲ್ಲಯ್ಯ ಸ್ವಾಮೀಜಿ

ಗೋಕಾಕ:ಬಸವಣ್ಣನವರ ವಚನಗಳನ್ನು ಶರಣ ಸಾಹಿತ್ಯವು ಸಮಸ್ತ ಲೋಕಕ್ಕೆ ಉಣಬಡಿಸಿದೆ : ಶ್ರೀ ಮಲ್ಲಯ್ಯ ಸ್ವಾಮೀಜಿ 

ಬಸವಣ್ಣನವರ ವಚನಗಳನ್ನು ಶರಣ ಸಾಹಿತ್ಯವು ಸಮಸ್ತ ಲೋಕಕ್ಕೆ ಉಣಬಡಿಸಿದೆ : ಶ್ರೀ ಮಲ್ಲಯ್ಯ ಸ್ವಾಮೀಜಿ

ಗೋಕಾಕ ಆ 24 : ಬಸವಣ್ಣನವರ ಅಮೃತವಾಣಿಗಳಿಂದ ಕೂಡಿರುವ ವಚನಗಳನ್ನು ಶರಣ ಸಾಹಿತ್ಯವು ಸಮಸ್ತ ಲೋಕಕ್ಕೆ ಉಣಬಡಿಸಿದೆ ಎಂದು ಘೋಡಗೇರಿ ಶಿವಾನಂದ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿ ನುಡಿದರು.
ಭಾನುವಾರ ಇಲ್ಲಿನ ಲಕ್ಷ್ಮೀ ಬಡಾವಣೆಯ ಶ್ರೀ ಬಸವ ಮಂದಿರದಲ್ಲಿ ಶ್ರೀ ಬಸವ ಸತ್ಸಂಗ ಸಮಿತಿ ಹಾಗೂ ಅಕ್ಕ ನಾಗಲಾಂಬಿಕಾ ಮಹಿಳಾ ಮಂಡಳʼದ ಸಂಯುಕ್ತ ಆಶ್ರಯದಲ್ಲಿ ಪವಿತ್ರ ಶ್ರಾವಣ ಮಾಸಾಚರಣೆ ಹಿನ್ನೆಲೆಯಲ್ಲಿ ಜರುಗಿದ ʼಶರಣ ಚರಿತ್ರಾಮೃತʼ ಪ್ರವಚನದ ಮಹಾ ಮಂತಲೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚ ನೀಡುತ್ತಿದ್ದ ಶ್ರೀಗಳು, ಶರಣರ ಚಾರಿತ್ರ್ಯಗಳನ್ನು ಗ್ರಂಥಗಳ ಮೂಲಕ ತಿಳಿದುಕೊಂಡು ನಮ್ಮ ಸಚ್ಚಾರಿತ್ರ್ಯವನ್ನು ನಿರ್ಮಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಇದಕ್ಕೂ ಪೂರ್ವದಲ್ಲಿ ಕೊಣ್ಣೂರಿನ ಕಾಡಸಿದ್ಧೇಶ್ವರ ಕೈವಲ್ಯಾಶ್ರಮದ ಶರಣ ಡಾ. ಬಸವರಾಜ ಚೌಗುಲಾ ಅವರು, ಕಳೆದೊಂದು ತಿಂಗಳ ಶ್ರಾವಣ ಮಾಸದಲ್ಲಿ ನೀಡಿದ ಪ್ರವಚನ ಮಾಲೆ ಸಮಸ್ತ ಮನುಕುಲಕ್ಕೆ ದಾರದೀಪವಾಗಿದೆ ಆದರೆ ಯುವ ಪೀಳಿಗೆ ಶರಣ ಸಾಹಿತ್ಯ ಕುರಿತು ಆಸಕ್ತಿ ತೋರದಿರುವುದು ವಿಷಾಧನೀಯ ಎಂದರು.
ಸಮಾರೋಪ ಆಶೀರ್ವಚನ ನೀಡಿದ ಹಾರೂಗೇರಿಯ ಶರಣ ವಿಚಾರ ವಾಹಿನಿʼಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಐ.ಆರ್‌.ಮಠಪತಿ ಅವರು, ಇಷ್ಠಲಿಂಗ ಜನಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಚರಿತ್ರೆಗಳು ನಮ್ಮ ಭವಿಷ್ಯ ನಿರ್ಮಿಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಅಶೋಕ ದಯನ್ನವರ ಅವರು ಸಮಿತಿಯ ಜೀರ್ಣೋದ್ಧಾರಕ್ಕೆ ರೂ. ಐದು ಲಕ್ಷ ದೇಣಿಗೆ ನೀಡುವ ವಾಗ್ದಾನ ಮಾಡಿದರು.
ವೇದಿಕೆಯಲ್ಲಿ ಶರಣೆ ಸುಶೀಲಾ ಕಲ್ಯಾಣಶೆಟ್ಟಿ, ಮಹಾಂತೇಶ ತಾಂವಶಿ, ಮಲ್ಲಿಕಾರ್ಜುನ ಕಲ್ಲೋಳಿ, ವೀರಣ್ಣ ಕೊಳಕಿ ಮತ್ತಿತರರು ಇದ್ದರು.
ಸಮಿತಿ ಕಾರ್ಯದರ್ಶಿ ಶೃತಿ ಕಂಬಾರ ಕಾರ್ಯಕ್ರಮ ನಿರೂಪಿಸಿದರು.

Related posts: