RNI NO. KARKAN/2006/27779|Thursday, October 16, 2025
You are here: Home » breaking news » ಬೆಳಗಾವಿ:ನೂತನ ಸಚಿವ ಸತೀಶ ಅವರಿಗೆ ಬೆಳಗಾವಿಯಲ್ಲಿ ಭವ್ಯ ಸ್ವಾಗತ

ಬೆಳಗಾವಿ:ನೂತನ ಸಚಿವ ಸತೀಶ ಅವರಿಗೆ ಬೆಳಗಾವಿಯಲ್ಲಿ ಭವ್ಯ ಸ್ವಾಗತ 

ನೂತನ ಸಚಿವ ಸತೀಶ ಅವರಿಗೆ ಬೆಳಗಾವಿಯಲ್ಲಿ ಭವ್ಯ ಸ್ವಾಗತ

ಬೆಳಗಾವಿ ಡಿ 25 : ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿಯಲ್ಲಿ ಭವ್ಯ ಸ್ವಾಗತ ದೊರೆಯಿತು .

ಸಚಿವರು ಬೆಳಗಾವಿಯ ಚನ್ನಮ್ಮ ಪ್ರತಿಮೆ ಮಾಲಾರ್ಪಣೆ ಮಾಡುತ್ತಲೆ ಅಲ್ಲಿ ನೇರದ್ದಿದ ಅವರ ಅಫಾರ ಅಭಿಮಾನಿ ಬಳಗ ಪಟಾಕಿ ಸಿಡಿಸಿ ಜಯ ಘೋಷ ಕೂಗಿ ವಿಜ್ರಂಭನೆ ಆಚರಿಸಿದರು . ನಂತರ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ, ಬಸವೇಶ್ವರ ಪ್ರತಿಮೆ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಸಚಿವರ ಮಾದ್ಯಮಗಳ ಜೊತೆ ಮಾತನಾಡಿ

ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆ ಹಾಗೂ ಸವಾಲುಗಳಿವೆ ಇವೆ. ಅವುಗಳನ್ನು ಹಂತ ಹಂತವಾಗಿ ಪರಿಹಾರ ಮಾಡಲು ಪ್ರಯತ್ನ ಮಾಡುತ್ತೇನೆ
ಬೆಳಗಾವಿ ನಗರದ ಅಭಿವೃದ್ಧಿ ಬಗ್ಗೆ ಜನರು ನಿರೀಕ್ಷೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ರಾಜಕೀಯ ಸಮಸ್ಯೆ ಇರುವದು ಸಹಜ ಅಂತಹ ಮುಖಂಡರ ಜತೆಗೆ ಚರ್ಚಿಸಿ ಪರಿಹಾರ ದೊರಕಿಸಿಕೋಳ್ಳುವದಾಗಿ  ಸತೀಶ ಜಾರಕಿಹೊಳಿ ಹೇಳಿದರು.

ಖಾತೆ ಹಂಚಿಕೆ ನಾಳೆ ಅಂತಿಮವಾಗಲಿದ್ದೆ , ಯಾವುದೇ  ಖಾತೆ ಕೊಟ್ಟರು ಅದನ್ನು ಪ್ರಮಾಣಿಕವಾಗಿ ನಿಭಾಯಿಸಲು ಸಿದ್ಧನಿದ್ದೇನೆ . ಸಂಪುಟ ಪುನರ ರಚನೆ ನಂತರ ಸಹಜವಾಗಿ ಅಸಮಾಧಾನ ಉದ್ದಭವಿಸಿದೆ
ಯಾರು ಕೂಡಾ ರಾಜೀನಾಮೆ ನೀಡಲ್ಲ.‌ರಮೇಶ ಜಾರಕಿಹೊಳಿ‌ ನಾನು ಚರ್ಚೆ ಮಾಡುತ್ತೇನೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವದಿಲ್ಲ ಪಕ್ಷ ವರಿಷ್ಠರು ಸಹ ರಮೇಶ ಜಾರಕಿಹೊಳಿ‌ ಜತೆಗೆ ಮಾತನಾಡಿಲಿದ್ದಾರೆ ಎಂದರು

ಬಿಜೆಪಿಯವರು ಹೇಳಿದ ತಕ್ಷಣ ಸರ್ಕಾರ ಬಿಳಲ್ಲ , ರಮೇಶ ಜಾರಕಿಹೊಳಿ‌ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ, ನಾನು ಅವರ ಜತೆಗೆ ಮಾತನಾಡುತ್ತೇನೆ.ಎಂದು ಸತೀಶ ತಿಳಿಸಿದರು

ನಂತರ ಸರ್ಕಿಟ ಹೌಸಗೆ ತೆರಳಿ ಸಾರ್ವಜನಿಕರಿಗೆ ಭೇಟಿ ಯಾದರು

 

Related posts:

ಗೋಕಾಕ:ದೇಶದ ಸ್ವಾತಂತ್ರಕ್ಕಾಗಿ ತನು-ಮನ-ಧನದಿಂದ ಹೋರಾಡಿದ ತ್ಯಾಗಿಗಳ ಜೀವನ ನಮಗೆಲ್ಲ ಆದರ್ಶವಾಗಿದೆ ; ಪ್ರಕಾಶ ಹೊಳೆಪ್ಪಗ…

ಗೋಕಾಕ:ರಡ್ಡೆರಹಟ್ಟಿ ಗ್ರಾಮದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ : ತಹಶೀಲ್ದಾರ ಪ್ರಕಾಶ ಹೋಳೆಪ…

ಗೋಕಾಕ:ಕಟ್ಟಿಮನಿ ಅವರು ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಹಿತಿಯಾಗಿ ನಾಡಿಗೆ ನೀಡಿದ ಸೇವೆ ಅಪಾರವಾಗಿದೆ : ಪ…