ಗೋಕಾಕ:ಹಲವಾರು ಮಹಿನೀಯರ ತ್ಯಾಗ ಬಲಿದಾನದ ದಿಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. : ತಹಶೀಲ್ದಾರ್ ಡಾ.ಮೋಹನ ಭಸ್ಮೆ

ಹಲವಾರು ಮಹಿನೀಯರ ತ್ಯಾಗ ಬಲಿದಾನದ ದಿಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. : ತಹಶೀಲ್ದಾರ್ ಡಾ.ಮೋಹನ ಭಸ್ಮೆ
ಗೋಕಾಕ ಅ 15 : ಹಲವಾರು ಮಹಿನೀಯರ ತ್ಯಾಗ ಬಲಿದಾನದ ದಿಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ತಹಶೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು
ಶುಕ್ರವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ, ಶಿಕ್ಷಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ 79ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.
ನಮ್ಮ ಸ್ವಾತಂತ್ರ್ಯದೊಂದಿಗೆ ಪರಿಸರದ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಕೊಳ್ಳಬೇಕು ಎಂದು ಡಾ.ಬಾಬಾಸಾಬೇಬ ಅಂಬೇಡ್ಕರ್. ಸಂವಿಧಾನದ ಮೂಲಕ ಹೇಳಿಕೊಟ್ಟಿದ್ದಾರೆ.
ನಮ್ಮ ಸುತ್ತಲಿನ ಪರಿಸರವನ್ನು ಸಹ ನಾವು ವಿಷಮುಕ್ತವಾಗಿ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಿಸಲು ಎಲ್ಲರೂ ಸಹಕರಿಸಬೇಕು. ಭಾರತ ಇಂದು ತಂತ್ರಜ್ಞಾನ ಸೇರಿದಂತೆ ಇತರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಸುಸ್ಥಿರ ಅಭಿವೃದ್ಧಿಗೆ ದೇಶದ ಎಲ್ಲಾ ಪ್ರಜೆಗಳು ಕೈಜೋಡಿಸಬೇಕು ಎಂದು ಹೇಳಿದ ಅವರು ನಮ್ಮ ಸಮಾಜ ಸುಂದರವಾಗಿಸಲು ನಾವು ಸಹಕಾರ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ವರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ನರಗಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷರು ಶ್ರೀಮತಿ ಬೀಬಿಬತುಲ್ ಜಮಾದಾರ, ಡಿ.ವಾಯ.ಎಸ್.ಪಿ. ರವಿ ನಾಯಿಕ, ಸಿಪಿಐ ಸುರೇಶ್ ಬಾಬು , ಅಶೋಕ್ ಪೂಜಾರಿ, ಬಿ.ಇ.ಓ ಜಿ.ಬಿ.ಬಳಗಾರ, ಪೌರಾಯುಕ್ತ ರವಿ ರಂಗಸಭೆ , ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ಹಿರಿಯ ನ್ಯಾಯವಾದಿ ಬಿ.ಆರ.ಕೊಪ್ಪ, ಎಂ.ಎಲ್.ಜನ್ಮಟ್ಟಿ, ಎಂ.ಎಂ.ನಧಾಫ್, ಎಂ.ಎಚ್.ಗಜಾಕೋಶ, ಡಾ.ಎಂ.ಎಸ್.ಕೊಪ್ಪದ, ಪಿಎಸ್ಐ ಕೆ.ವಾಲಿಕರ, ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಸೋಮಶೇಖರ್ ಮಗದುಮ್ಮ ,ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
