RNI NO. KARKAN/2006/27779|Monday, February 17, 2025
You are here: Home » breaking news » ಗೋಕಾಕ :ತಾಲೂಕು ರಚನೆಗಾಗಿ ಕೌಜಲಗಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ಗೋಕಾಕ :ತಾಲೂಕು ರಚನೆಗಾಗಿ ಕೌಜಲಗಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ 

ತಾಲೂಕು ರಚನೆಗಾಗಿ ಕೌಜಲಗಿ ಬಂದ್ ಗೆ ಮಿಶ್ರ ಪ್ರತಿಕ್ರ

ಗೋಕಾಕ ಡಿ 19: ಗೋಕಾಕ ತಾಲೂಕಿನ ಅತೀ ದೊಡ್ಡ ಪಟ್ಟಣ ಕೌಜಲಗಿ ತಾಲೂಕು ರಚನೆಗಾಗಿ ಇಂದು ಕೌಜಲಗಿ ಬಂದ್ ಮಾಡಲಾಯಿತು. ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಮಂಚದ ಸಂಚಾಲಕ ಅರವಿಂದ ದಳವಾಯಿ ನೇತೃತ್ವದಲ್ಲಿ ಪಟ್ಟಣದ ಅಂಗಡಿ-ಮುಗ್ಗಟ್ಟುಗಳನ್ನು ಬಂದ ಮಾಡಿಸಿ ಟಾಯರಗಳಿಗೆ ಬೆಂಕಿ ಹಚ್ಚಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು .

ಕೌಜಲಗಿ ಹಾಗೂ ರಾಮದುರ್ಗ, ಸವದತ್ತಿ ತಾಲೂಕಿನ ಗಡಿಭಾಗದ ಗ್ರಾಮಸ್ಥರು ಕೂಡಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೌಜಲಗಿ ತಾಲೂಕು ಆಗಲೇಬೇಕೆಂದು ಘೋಷಣೆ ಕೂಗಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ನಂತರ ಪ್ರತಿಭಟನೆಕಾರರು ಕೌಜಲಗಿ ಉಪತಹಶೀಲ್ದಾರ ಕಚೇರಿಗೆ ತೆರಳಿ ಬಿ.ಎ.ದೇವಡಿ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ತಾಲೂಕು ರಚನೆ ಕೌಜಲಗಿ ಬಂದ್‍ನಲ್ಲಿ ಟಾಯರಗಳನ್ನು ಸುಟ್ಟು ಪ್ರತಿಭಟಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಕೌಜಲಗಿ ತಾಲೂಕು ಹೋರಾಟ ಮಂಚದ ಸಂಚಾಲಕ ಅರವಿಂದ ದಳವಾಯಿ ಅವರು ಕೌಜಲಗಿ ಪಟ್ಟಣ ಸಂಸ್ಥಾನಿಕ ಆಡಳಿತ ಕೇಂದ್ರವಾಗಿದ್ದು ಆಡಳಿತಾತ್ಮಕವಾಗಿ ಹೋಬಳಿ ಕೇಂದ್ರವಾಗಿದೆ. 45 ವರ್ಷಗಳಿಂದಲೂ ಕೌಜಲಗಿ ತಾಲೂಕಿಗಾಗಿ ಹೋರಾಡುತಾ ಬಂದಿದೆ. ತಾಲೂಕು ಪುನರ್ವಿಂಗಡಣಾ ಸಮಿತಿಗಳು ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಶಿಫಾರಸ್ಸು ಮಾಡಿವೆ. ಕೌಜಲಗಿ ಸವದತ್ತಿ ಮತ್ತು ರಾಮದುರ್ಗ ತಾಲೂಕಿನ ಗಡಿಭಾಗದ ಸುಮಾರು 50 ಗ್ರಾಮಗಳಿಗೆ ಮಧ್ಯವರ್ತಿ ಕೇಂದ್ರವಾಗಿದ್ದು, ಕೌಜಲಗಿಯನ್ನು ಸರಕಾರ ನೂತನ ತಾಲೂಕನ್ನಾಗಿ ರಚಿಸಬೇಕು. ಈ ಭಾಗದ ಜನರಿಗೆ ಆಡಳಿತಾತ್ಮಕವಾಗಿ ಅನುಕೂಲ ಮಾಡಿಕೊಡಬೇಕೆಂದು ಸರಕಾರವನ್ನು ಆಗ್ರಹಿಸಿದರು.

ಕೌಜಲಗಿ ತಾಲೂಕಾ ಹೋರಾಟ ಸಮಿತಿಯು ಈ ಬಂದಗೆ ಬೆಂಬಲ ನೀಡದಿದ್ದರಿಂದ ಬಂದಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದು ಎದ್ದು ಕಾಣುವಂತಿತ್ತು

ಈ ಸಂದರ್ಭದಲ್ಲಿ ಪ್ರಕಾಶ ಕೋಟಿನತೋಟ, ಮಾರುತಿ ಥರಕಾರ, ಸಿದ್ದಪ್ಪ ಹುಂಡರದ, ಸಿದ್ದಪ್ಪ ಖಾನಟ್ಟಿ, ರಾಜ್ಯ ರೈತ ಸಂಘದ ಮುಖಂಡ ತ್ಯಾಗರಾಜ ಕದಮ್, ಈರಪ್ಪ ಸಸಾಲಟ್ಟಿ, ಹಣಮಂತ ಸಿದ್ದಾಪೂರ, ಶಿವಲಿಂಗ ಮೂಲಿಮನಿ, ಅಪ್ಪಾಜಿ ಖಿಲಾರಿ, ವಿಜಯ ಮಾವರಕರ, ಲಕ್ಷ್ಮಣ ಗೌಡರ, ಕರೆಪ್ಪ ಬಿಸಗುಪ್ಪಿ, ಸಂಗಪ್ಪ ಕಳ್ಳಿಗುದ್ದಿ, ಶಿವಾನಂದ ಕಪರಟ್ಟಿ, ಕರೆಪ್ಪ ಕುರಬಗಟ್ಟಿ ಹಾಗೂ ಸುತ್ತಲಿನ ಗ್ರಾಮದ ಹಿರಿಯರು ಮತ್ತು ಕೌಜಲಗಿ ಪಟ್ಟಣದ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಬಂದ್‍ನಲ್ಲಿ ಪಾಲ್ಗೊಂಡಿದ್ದರು.

Related posts: