ಗೋಕಾಕ:ಜನಮನ ಸೆಳೆದ ಕುದುರೆ ಗಾಡಿ ಹಾಗೂ ಸೈಕಲ್ ಶರ್ತುಗಳು

ಜನಮನ ಸೆಳೆದ ಕುದುರೆ ಗಾಡಿ ಹಾಗೂ ಸೈಕಲ್ ಶರ್ತುಗಳು
ಗೋಕಾಕ ಜು 7 : ಗೋಕಾಕ ನಗರದ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರದಂದು ಹಮ್ಮಿಕೊಂಡಿದ್ದ ಕುದುರೆ ಗಾಡಿ ಶರ್ತಿನಲ್ಲಿ ಕುದುರೆಗಳ ರೋಮಾಂಚನಕಾರಿ ಓಟ ಹಾಗು ಸೈಕಲ್ ಸ್ಫರ್ಧೆಗಳು ಜನರ ಗಮನ ಸೆಳೆದವು.
ನಗರದ ಕರೇಪ್ಪ ಭಂಡಾರಿ ಇವರ ಕುದುರೆಗಳು ಪ್ರಥಮ 2ಲಕ್ಷ ರೂ ಒಂದು ಡಾಲ್, ಕಿರಣ ರಂಕನಕೊಪ್ಪ ಇವರ ಕುದುರೆಗಳು ದ್ವೀತೀಯ 1ಲಕ್ಷ ರೂ, ಉಮರಾಣಿಯ ರಾಜು ಇವರ ಕುದುರೆಗಳು ತೃತೀಯ 50ಸಾವಿರ ರೂಗಳನ್ನು ಪಡೆದುಕೊಂಡರು.
ಸೈಕಲ್ ಸ್ಫರ್ಧೆಯಲ್ಲಿ ಅವರಾದಿ ಗ್ರಾಮದ ಕರೇಪ್ಪ ಕೊಕ್ಕಡಿ ಪ್ರಥಮ 1ಲಕ್ಷ ರೂ, ಬಿಳಗಿಯ ಅರುಣ ಲಮಾಣಿ ದ್ವಿತೀಯ 75ಸಾವಿರ ರೂ, ವಿಜಯಪುರದ ಮಹಮ್ಮದ ಸಾಧನಿ ತೃತೀಯ 50ಸಾವಿರ ರೂ ಹಾಗೂ ಕೊಲ್ಹಾಪೂರದ ಸಿದ್ದೇಶ ಪಾಟೀಲ ನಾಲ್ಕನೇ ಸ್ಥಾನ ಪಡೆದು 25ಸಾವಿರ ಬಹುಮಾನ ಪಡೆದುಕೊಂಡರು.
ಕುದುರೆ ಗಾಡಿ ಶರ್ತು ಮತ್ತು ಸೈಕಲ್ ಸ್ಫರ್ಧೆಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿ, ನಗದು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಯುವ ನಾಯಕ ಅಮರನಾಥ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ನಗರಸಭೆ ಅಧ್ಯಕ್ಷ ಪ್ರಕಾಶ್ ಮುರಾರಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಜಾತ್ರಾ ಕಮಿಟಿಯ ಪ್ರಭು ಚವ್ಹಾಣ, ಅಡಿವೆಪ್ಪ ಕಿತ್ತೂರ, ಸಗೀರ ಕೋತವಾಲ, ಸಾಗರ ಗುಡ್ಡದಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.