RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಗ್ರಾಮ ದೇವತೆಗಳ ಐತಿಹಾಸಿಕ ಜಾತ್ರೆಗೆ ಸಜ್ಜಾದ ಗೋಕಾಕ ನಗರ

ಗೋಕಾಕ:ಗ್ರಾಮ ದೇವತೆಗಳ ಐತಿಹಾಸಿಕ ಜಾತ್ರೆಗೆ ಸಜ್ಜಾದ ಗೋಕಾಕ ನಗರ 

ಗ್ರಾಮ ದೇವತೆಗಳ ಐತಿಹಾಸಿಕ ಜಾತ್ರೆಗೆ ಸಜ್ಜಾದ ಗೋಕಾಕ ನಗರ

ಗೋಕಾಕ ಜೂ 29 : ಗೋಕಾಕ ಗ್ರಾಮ ದೇವತೆ ಜಾತ್ರೆಗೆ ಭರದಿಂದ ತಯಾರಿ ನಡೆದಿದ್ದು, ನಗರದಾದ್ಯಂತ ದೀಪಾಲಂಕಾರ, ಜಾತ್ರೆಗೆ ಬರುವವರಿಗೆ ಸ್ವಾಗತ ಕೋರಲು ಬೃಹದಾಕಾರದ ಬ್ಯಾನರಗಳು ನಗರದಲ್ಲಿ ರಾರಾಜಿಸುತ್ತಿದ್ದು,ಪ್ರತಿ ಐದು ವರ್ಷಕ್ಕೆ ಒಮ್ಮೆ ಜರಗುವ ಗೋಕಾಕ ಗ್ರಾಮ ದೇವತೆಯರ ಜಾತ್ರೆಗೆ ಕೈಬಿಸಿ ಕೆರಯುತ್ತಿವೆ.

ಈಗಾಗಲೇ ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಜಾತ್ರೆಯ ಬಗ್ಗೆ ಸಾಕಷ್ಟು ಪೂರ್ವಭಾವಿ ಸಭೆಗಳನ್ನು ನಡೆಸಿ ಜಾತ್ರೆಯು ಸುಸುತ್ರವಾಗಿ ಜರುಗಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಬಾರಿ ಜಾತ್ರೆಯ ಸಂದರ್ಭದಲ್ಲಿ ಆದ ಟ್ರಾಫೀಕ್, ಪಾರ್ಕಿಂಗ್ ಮತ್ತು ಜೇಬುಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದು ಇದಕ್ಕೆ ಪೋಲಿಸ್ ಇಲಾಖೆಯಿಂದ ಸುಮಾರು 2500ಕ್ಕೂ ಹೆಚ್ಚುಜನ ಸಿಬ್ಬಂಧಿ ನಿಯೋಜನೆ ಹಾಗೂ ಫೇಸ್ ಟ್ರ್ಯಾಪಿಂಗ್ ಕ್ಯಾಮೆರಾ ಅಳವಢಿಸಲಾಗುತ್ತಿದೆ. ಕಡಬಗಟ್ಟಿ ರಸ್ತೆ ಮಾರ್ಗವಾಗಿ ಬರುವ ಜನರಿಗೆ ಎರಡು ಕಡೆ ಪಾರ್ಕಿಂಗ್, ಗೋಕಾಕ ಫಾಲ್ಸ ಮಾರ್ಗವಾಗಿ, ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಹಾಗೂ ಲೋಳಸೂರ ಮಾರ್ಗವಾಗಿ ಬರುವ ಸಾರ್ವಜನಿಕರಿಗೆ ಎರಡೆರಡು ಕಡೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ನಗರದ ಮಯೂರ ಶಾಲೆಯ ಆವರಣದಲ್ಲಿ ಸೇರಿ 9ಸ್ಥಳಗಳಲ್ಲಿ ಪಾರ್ಕಿಂಗ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಕಮೀಟಿಯಿಂದ ಡ್ರೋಣ ಕ್ಯಾಮೆರಾಗಳ ವ್ಯವಸ್ಥೆ ಹಾಗೂ ಸಾರ್ವಜನಿಕರು ಇರುವ ಸ್ಥಳದಲ್ಲೆ ಎಲ್.ಇ.ಡಿ ಸ್ಕ್ರೀನ್‍ಗಳ ಮೂಲಕ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಆರೋಗ್ಯ ಇಲಾಖೆಯಿಂದ ಪ್ರಮುಖ ಸ್ಥಳಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಮತ್ತು ಅಂಬ್ಯಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ. ಅಗ್ನಿ ಅವಘಡಗಳು ಆಗದಂತೆ ಹೆಸ್ಕಾಂ ಅಧಿಕಾರಿಗಳು ರಥ ಬೀದಿಯ ಪಕ್ಕದಲ್ಲಿ ಬರುವ ಗಿಡ ಮರಗಳ ರೆಂಬೆಕೊಂಬೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಲು ಹಾಗೂ ರಸ್ತೆಯ ಕ್ರಾಸ್ ಮೇಲೆ ಹಾಕಲಾಗ ವೈರಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ನಗರದ ಗ್ರಾಮ ದೇವತೆಯರ ದೇವಸ್ಥಾನ ಸೇರಿ ರಥ ಬೀದಿಯ ವರೆಗೆ ಸಂಚರಿಸಲು ಉಚಿತ ಸಾರಿಗೆ ಬಸ್ಸುಗಳ ವ್ಯವಸ್ಥೆ, ಹುಬ್ಬಳ್ಳಿ-ಧಾರವಾಡ ಭಾಗದಿಂದ ಬರುವ ಸಾರಿಗೆ ವಾಹನಗಳಿಗೆ ಎಪಿಎಮ್‍ಸಿಯಲ್ಲಿ ನಿಲುಗಡೆ ವ್ಯವಸ್ಥೆ ಮಾಡಿದ್ದು ಅಲ್ಲಿಂದ ನಗರಕ್ಕೆ ಬರಲು ಬಸ್ಸುಗಳ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚಕಟ್ಟಾಗಿ ನಿರ್ವಹಿಸುವಂತೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಾತ್ರೆಗೆ ಅಮೂಜಮೆಂಟ್ ಪಾರ್ಕ್, ಸರ್ಕಸ್, ರಂಗ ನಾಟಕಗಳು, ಸೇರಿದಂತೆ ನಗರದಾದ್ಯಂತ ಅಲ್ಲಲ್ಲಿ ಅಂಗಡಿಗಳು ತೆರೆದುಕೊಂಡು ಜಾತ್ರೆಯ ಮೆರಗನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ನಗರದ ಲಕ್ಷ್ಮೀ ದೇವಿ ದೇವಸ್ಥಾನದ ಪಕ್ಕದಲ್ಲಿ ಬೃಹದಾಕಾರದ ಜೊಕ್ಕಾಲಿಗಳು, ತೊಟ್ಟಿಲುಗಳು, ಬ್ರೇಕ್ ಡ್ಯಾನ್ಸ್ ಸೇರಿದಂತೆ ಅನೇಕ ಚಿಕ್ಕ, ಚಿಕ್ಕ ಪ್ರಮಾಣದ ಅಮೂಜಮೆಂಟಗಳು ಮಕ್ಕಳನ್ನು , ಯುವಕರು ಕೈ ಬಿಸಿ ಕರೆಯುತ್ತಿವೆ. ನಗರದ ತಂಬಾಕೆ ಜಾಗೆಯಲ್ಲಿ ಸರ್ಕಸ್ ಗಾಗಿ ಬೃಹದಾಕಾರದ ಟೆಂಟ್ ನಿರ್ಮಿಸಲಾಗಿದ್ದು, ಸರ್ಕಸ್ ನಲ್ಲಿ ಹಗ್ಗದ ಮೇಲೆ ಸೈಕಲ್ ಓಡಿಸುವುದು, ಒಂದು ಜೋಕಾಲಿ ಯಿಂದ ಇನ್ನೊಂದು ಜೋಕಾಲಿಗೆ ಜಿಗಿಯುವುದು ಸೇರಿದಂತೆ ಅನೇಕ ಆಟಗಳು ಸರ್ಕನ ಮೆರಗನ್ನು ಹೆಚ್ಚಿಸಿವೆ. ಇನ್ನು ರಂಗ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ರಂಗ ಕಲಾವಿದರು ನಗರದ ಮೂರು ಕಡೆಗಳಲ್ಲಿ. ಸಮಾಜಿಕ ಹಾಸ್ಯ್ ಭರಿತ ನಾಟಕಗಳು ಪ್ರದರ್ಶನವಾಗಲಿವೆ. ಇದನ್ನು ನೋಡಲು ಸಹ ಜನರು ಕಾತುರದಿಂದ ಕಾಯುತ್ತಿದ್ದು, ಮೆರೆಯಾಗುತ್ತಿರುವ ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸಲು ಜಾತ್ರೆಯ ಸಂದರ್ಭದಲ್ಲಿ ಜನರಿಗೆ ಒಂದು ಒಳ್ಳೆಯ ಅವಕಾಶವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕಗಳು ವಿಕ್ಷೀಸಬೇಕು ಎಂದು ರಂಗ ಕಲಾವಿದರು ಮನವಿ ಮಾಡಿಕೊಂಡಿದ್ದಾರೆ.


ಈ ಜಾತ್ರೆಯ ಮತ್ತೊಂದು ವಿಶೇಷವೆಂದರೆ ಭಂಡಾರ. ಸತತ ಮೂರುದಿನಗಳ ಕಾಲ ಜರಗುವ ರಥೋತ್ಸವದಲ್ಲಿ ಭಾರಿ ಪ್ರಾಮಾಣದ ಭಂಡಾರ ಹಚ್ಚುವ ಸಂಪ್ರದಾಯ ಇದ್ದು ಇದಕ್ಕಾಗಿ ಭಾಗಶಃ ಟ್ರಕು ಗಂಟಲೆ ಭಂಡಾರ ಬಿಕರಿಯಾಗುವ ಸಾಧ್ಯತೆ ಇದೆ. ಈ ಮೂರುದಿನಗಳ ಕಾಲ ನಡೆಯುವ ರಥೋತ್ಸವದಲ್ಲಿ ಲಕ್ಷಾಂತರ ಜನರು ಸೇರುವ ‌ಸಾಧ್ಯತೆಗಳು ಇವೆ.ಪತ್ರಿ ಐದು ವರ್ಷಕ್ಕೊಮ್ಮೆ ಜರುಗುವ ಈ ಐತಿಹಾಸಿಕ ಜಾತ್ರೆಯು 2020ರಲ್ಲಿ ಎರಗಿದ ಕೋವಿಡ ಕಾರಣದಿಂದ ರದ್ದಾಗಿದ್ದು, ಈಗ 10 ವರ್ಷಗಳ ನಂತರ ಜರುಗಿತ್ತಿದ್ದು, ಗೋಕಾಕ ಗ್ರಾಮದೇವತೆಯರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.
ಒಟ್ಟಾರೆಯಾಗಿ 10 ವರ್ಷದ ನಂತರ ನಡೆಯುತ್ತಿರುವ ಈ ಐತಿಹಾಸಿಕ ಜಾತ್ರೆಗೆ ಗೋಕಾಕ ನಗರ ಸಜ್ಜಾಗಿದೆ.

Related posts: