ಗೋಕಾಕ:ಜೂ 21 ರಂದು ವಿಶ್ವ ಯೋಗ ದಿನಾಚರಣೆ ಆಚರಣೆ : ತಹಶೀಲ್ದಾರ ಡಾ.ಮೋಹನ್ ಭಸ್ಮೆ

ಜೂ 21 ರಂದು ವಿಶ್ವ ಯೋಗ ದಿನಾಚರಣೆ ಆಚರಣೆ : ತಹಶೀಲ್ದಾರ ಡಾ.ಮೋಹನ್ ಭಸ್ಮೆ
ಗೋಕಾಕ ಜೂ 19 : ವಿಶ್ವ ಯೋಗ ದಿನಾಚರಣೆಯನ್ನು ಜೂ 21 ರಂದು ಮುಂಜಾನೆ 5:30 ಕ್ಕೆ ನಗರದ ಮಯೂರ ಸ್ಕೂಲ್ ಮೈದಾನದಲ್ಲಿ ಅತ್ಯಂತ ವಿಜೃಂಭ್ರಣೆಯಿಂದ ತಾಲೂಕು ಆಡಳಿತ ಹಾಗೂ ವಿವಿಧ ಸಂಘ,ಸಂಸ್ಥೆಗಳ ಆಶ್ರಯದಲ್ಲಿ ಆಚರಿಸಲಾಗುವುದು ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ಬುಧವಾರದಂದು ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಗತ್ತಿಗೆ ಯೋಗದ ಮಹತ್ವವನ್ನು ತಿಳಿಸಿಕೊಟ್ಟ ದೇಶ ನಮ್ಮದಾಗಿದ್ದೆ.ಮಾನವರ ನೆಮ್ಮದಿಯ ಬದುಕಿಗೆ ಯೋಗ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ಅತಂಹ ಯೋಗವನ್ನು ಇಂದಿನ ಯುವ ಪಿಳಿಗೆಯಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಂದು ಸಾವಿರಾರು ಸಂಖ್ಯೆಯಲ್ಲಿ ಎಲ್ಲರೂ ಶ್ವೇತ ವಸ್ತ್ರದೊಂದಿಗೆ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೋಳಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಬ್ರಹ್ಮನಾಂದ ಸ್ವಾಮೀಜಿ, ವಿವಿಧ ಸಂಘಟನೆಗಳ ಮುಖ್ಯಸ್ಥರುಗಳಾದ ನಿಜಲಿಂಗ ದಡ್ಡಿಮನಿ , ಪರಮೇಶಿ ಗುಲ್, ಎಲ್.ಕೆ.ತೋರಣಗಟ್ಟಿ, ರಾಮಚಂದ್ರ ಕಾಕಡೆ, ಸದಾಶಿವ ಗುದಗಗೋಳ, ಶಿವಲಿಂಗ ಕೆ., ಸೋಮಶೇಖರ್ ಮಗದುಮ್ಮ, ಅಶೋಕ ಲಗಮಪ್ಪಗೋಳ, ವಿಷ್ಣು ಲಾತೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.