RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಬೋರಗಾಂವ ಸಹಕಾರಿ ಸಂಘದ 42ನೇ ಶಾಖೆ ಗೋಕಾಕ ಜನತೆಯ ಸೇವೆಗೆ ಅಣಿ

ಗೋಕಾಕ:ಬೋರಗಾಂವ ಸಹಕಾರಿ ಸಂಘದ 42ನೇ ಶಾಖೆ ಗೋಕಾಕ ಜನತೆಯ ಸೇವೆಗೆ ಅಣಿ 

ಬೋರಗಾಂವ ಸಹಕಾರಿ ಸಂಘದ 42ನೇ ಶಾಖೆ ಗೋಕಾಕ ಜನತೆಯ ಸೇವೆಗೆ ಅಣಿ

ಗೋಕಾಕ ಮೇ10 : ಸಹಕಾರಿ ಸಂಸ್ಥೆಯ ಶ್ರೇಯಸ್ಸು ಸಂಸ್ಥೆಯ ಆಡಳಿತ ಮಂಡಳಿಯ ಒಗ್ಗಟ್ಟನ್ನು ಅವಲಂಭಿಸಿದ್ದು, ತನ್ನ 42ನೇ ಶಾಖೆಯನ್ನು ಇಲ್ಲಿ ಆರಂಭಿಸಿರುವ ಬೋರಗಾಂವ ಅರ್ಬನ್‌ ಕೋ-ಆಪ್‌ ಕ್ರೆಡಿಟ್‌ ಸೊಸೈಟಿʼಯ ಆಡಳಿತ ಮಂಡಳಿಯು ಗೋಕಾಕ ಮತ್ತು ಸುತ್ತಮುತ್ತಲಿನ ಜನರ ಸೇವೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್‌ ಮುಖಂಡ ಹಿರಿಯ ಸಹಕಾರಿ ಅಶೋಕ ಪೂಜಾರಿ ಆಶಿಸಿದರು.
ಶನಿವಾರ ಇಲ್ಲಿನ ರವಿವಾರ ಪೇಟೆಯ ರಾಠೋಡ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಬೋರಗಾಂವ ಅರ್ಬನ್‌ ಕೋ-ಆಪ್‌ ಕ್ರೆಡಿಟ್‌ ಸೊಸೈಟಿಯ 42ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ನೂತನ ಸಹಕಾರಿಯ ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ತಾತ್ಯಾಸೋ ರಾಜಗೊಂಡಾ ಪಾಟೀಲ ಅವರು ಮಾತನಾಡಿ, ಸಹಕಾರಿ ರಂಗದಲ್ಲಿ ಹೊಂದಿರುವ ಸುದೀರ್ಘ ಅನುಭವವನ್ನು ಅಳತೆಗಿಟ್ಟು ಮಲ್ಟಿ-ಸ್ಟೇಟ್‌ ಅನುಮತಿ ಹೊಂದಿರುವ ನೂತನ ಶಾಖೆಯಿಂದ ಸಾರ್ವಜನಿಕರು / ಗ್ರಾಹಕರು ನೆಟ್‌ ಬ್ಯಾಂಕಿಂಗ್‌ಸೇವೆಯಲ್ಲದೇ ವ್ಯಾಪಾರ-ವಹಿವಾಟು ಸಾಲ, ಬಂಗಾರ ಅಡಮಾನ ಸಾಲ, ನಿರವೇಶನ ಖರೀದಿಗೆ ಸಾಲ, ಮನೆ ನಿರ್ಮಾಣಕ್ಕೆ ಸಾಲ, ವಾಹನ ಖರೀದಿಗೆ ಸಾಲ ಹೀಗೆ ಇನ್ನೂ ಅನೇಕ ಬಗೆಯ ಸಾಲ ಸೌಲಭ್ಯ ಮತ್ತು ಠೇವುಗಳ ಮೇಲೆ ಆಕರ್ಷಕ ಬಡ್ಡಿ ನೀಡಲಾಗುತ್ತದೆ ಎಂದು ಗ್ರಾಹಕರ ಸೇವಾ ಸೌಕರ್ಯಗಳನ್ನು ವಿವರಿಸಿದರು.
ಇದಕ್ಕೂ ಮೊದಲು ಸಹಕಾರಿ ಮುಖಂಡ ಅಶೋಕ ಪೂಜಾರಿ ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಲ ಮಹಾಮಂಡಳರದ ನಿರ್ದೇಶಕರುಗಳಾದ ಡಾ. ಸಂಜಯ ಹೊಸಮಠ ಮತ್ತು ತಮ್ಮಣ್ಣಾ ಕೆಂಚರಡ್ಡಿ, ಬಾಳಯ್ಯ ಕಂಬಿ, ಮಹಾಂತೇಶ ಹಿರೇಮಠ ಮೊದಲಾದವರು ಪಾಲ್ಗೊಂಡಿದ್ದರು.
ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ರೋಹಣ ಪಾರ್ಖೇ, ಶಾಖಾ ಪ್ರಬಂಧಕ ಉದಯಕುಮಾರ ದಾನವಾಡೆ ಉಪಸ್ಥಿತರಿದ್ದರು.

Related posts: