ಗೋಕಾಕ:ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ

ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ
ಗೋಕಾಕ ಏ 20 : ಪುಸ್ತಕಗಳು ವ್ಯಕ್ತಿತ್ವವನ್ನು ರೂಪಿಸಿ ಮಾನವೀಯತೆ ಹಾಗೂ ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ ಎಂದು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಸ್ .ನಾವಿ ಹೇಳಿದರು
ರವಿವಾರದಂದು ಇಲ್ಲಿನ ಕೆಎಲ್ಇ ಶಾಲಾ ಆವರಣದಲ್ಲಿ ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆ, ಗೋಕಾವಿ ಗೆಳೆಯರ ಬಳಗ, ಭಾವಾಯಾನ ಸಾಹಿತ್ಯ ವೇದಿಕೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕವಿ, ಶಿಕ್ಷಕ ಈಶ್ವರ ಮಮದಾಪೂರ ಇವರ ಕೃತಿಗಳ ಲೋಕಾರ್ಪಣೆ, ಕವಿತೆ ಮತ್ತು ಗಜಲ್ ಗೋಷ್ಠಿಯ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಗೋಳಿಸಿ ಅವರು ಮಾತನಾಡಿದರು
ಸಮಾಜದಲ್ಲಿ ಸಹಾನುಭೂತಿ ಬೆಳೆಸಿಕೊಳ್ಳಲು ಪುಸ್ತಕಗಳು ಸಹಕಾರಿಯಾಗಿವೆ. ಪುಸ್ತಕಗಳ ಮೂಲಕ ನಾವು ಬರಹಗಾರ ಮನಸ್ಸು ತಿಳಿದು ಕೊಳ್ಳಬಹುದು. ಲೇಖಕರ ಚಿಂತನೆಗಳನ್ನು ಅರಿತುಕೊಂಡು ನಾವು ಓದಿನ ರುಚಿಯನ್ನು ಹಚ್ಚಿಕೊಳ್ಳಬೇಕು . ಪುಸ್ತಕ ವೆಂದರೆ ಅಕ್ಷರಗಳನ್ನು ಸಾಲು ಸಾಲಾಗಿ ಜೋಡಿಸುವುದಲ್ಲ ಅದರಲ್ಲಿ ಅವರು ಪಟ್ಟಂತ ನೋವುಗಳು ಆಡಿಗಿರುತ್ತವೆ ಅವುಗಳನ್ನು ನಾವು ಆರಿತು ಕೊಳ್ಳಬೇಕು. ಪುಸ್ತಕಗಳು ಹೊಸ ,ಹೊಸ ವಿಚಾರಗಳನ್ನು ಹೊತ್ತುಕೊಂಡು ಪ್ರಕಟಣೆ ಗೊಂಡಿರುತ್ತವೆ. ಇದರಲ್ಲಿಯ ವಿಚಾರಗಳನ್ನು ಬರೀ ಓದಿಗೆ ಸಿಮಿತಗೊಳಿಸಿದೆ ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮೆಲ್ಲರ ಜೀವನದಲ್ಲಿ ಪುಸ್ತಕಗಳ ಪಾತ್ರವೆನು? ಎಂಬುದನ್ನು ಅರಿತಿಕೊಳ್ಳಬೇಕು. ಇಂಟರ್ನೆಟ್ ಜೀವನದಲ್ಲಿ ನಾವು ಪುಸ್ತಕ ವನ್ನು ಓದುವ ಪ್ರವೃತ್ತಿ ಮೆರೆಯುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ಓದಿನತ್ತ ಕೊಂಡ್ಯೊಯಲು ಪುಸ್ತಕಗಳ ಅತ್ಯಂತ ಮಹತ್ವದ ಪಾತ್ರವಹಿಸಿವೆ. ಇಂದಿನ ಲೇಖಕರನ್ನು ನಾವು ಬೆಂಬಲಿಸುವ ಕಾರ್ಯಮಾಡಿ ಯುವ ಬರಹಗಾರರಿಗೆ ಬೆಳೆಸಬೇಕಾಗಿದೆ. ಆ ದಿಸೆಯಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ವಹಿಸಿದ್ದರು.
ಗದ್ಯಸುಂಗಧ, ಕಣ್ಣೊಳಗಿನ ಕಣ್ಣು, ಈಶ್ವರನ ದ್ವಪದಿಗಳು,ಕಲ್ಲಿಗೂ ಮನಸ್ಸಿದೆ ಎಂಬ ಪುಸ್ತಕಗಳ ಕುರಿತು ನೀರಜಾ ಗಣಾಚಾರಿ,ಅಬ್ದುಲ್ ಹೈ ತೋರಗಲ್ಲು ಶಿರೀಷ ಜೋಶಿ, ಡಾ.ಮಹಾನಂದಾ ಪಾಟೀಲ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಮಹಾಂತೇಶ ತಾವಂಶಿ, ಭಾರತಿ ಮದಭಾವಿ,ಬವರಾಜ ಖಾನಪ್ಪನವರ, ನರಸಿಂಹ ಗುರು ಪೂಜಾರಿ ಕೃತಿಕಾರ ಈಶ್ವರ ಮಮದಾಪೂರ ಉಪಸ್ಥಿತರಿದ್ದರು.