ಗೋಕಾಕ:ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವಂತೆ ಐಜಿಪಿ ಡಾ.ಚೇತನ ಸಿಂಗ ಅವರಿಗೆ ಡಾ.ಕಡಾಡಿ ಮನವಿ

ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವಂತೆ
ಐಜಿಪಿ ಡಾ.ಚೇತನ ಸಿಂಗ ಅವರಿಗೆ ಡಾ.ಕಡಾಡಿ ಮನವಿ
ಗೋಕಾಕ ಮಾ 29 : ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ, ತಾಲೂಕಿನ ಖನಗಾಂವ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆ, ಗೋಕಾಕ ಶಹರ ಮತ್ತು ಗ್ರಾಮೀಣ ಠಾಣೆಯ ಸಿಬ್ಬಂದಿಗಳಿಗಾಗಿ ‘ಪೋಲಿಸ್ ವಸತಿ ಗೃಹ ಹಾಗೂ ಗೋಕಾಕ ಶಹರ ಮತ್ತು ಗ್ರಾಮೀಣ ಠಾಣೆಗಳಲ್ಲಿ ಹಾಲಿ ಹುದ್ದೆ ಭರ್ತಿ ಮಾಡುವುದರ ಜೊತೆಗೆ ಸಿಬ್ಬಂದಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಶನಿವಾರದಂದು ನಗರದ ಡಿ.ವಾಯ್.ಎಸ್.ಪಿ ಕಛೇರಿಯಲ್ಲಿ ಗೋಕಾಕ ನಗರಕ್ಕೆ ಭೇಟಿನೀಡಿದ ಬೆಳಗಾವಿ ಉತ್ತರ ವಲಯದ ಐಜಿಪಿ ಡಾ.ಚೇತನ್ ಸಿಂಗ ರಾಠೋಡ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರಿಗೆ ಇಲ್ಲಿನ ಕಾಂಗ್ರೆಸ್ ಮುಖಂಡ ಡಾ.ಮಹಾಂತೇಶ ಕಡಾಡಿ ಭೇಟಿಯಾಗಿ ಮನವಿ ಅರ್ಪಿಸಿದರು.