ಗೋಕಾಕ:ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ
ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ
ಗೋಕಾಕ: ಅ 31: ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರಕಾರ ಅತ್ಯಂತ ಲಜ್ಜೆಗೆಟ್ಟ ಸರಕಾರ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು
ಗೋಕಾಕ ಜ್ಞಾನಮಂದಿರ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ತೋರಿದರವರನ್ನು ಬಿಜೆಪಿ ಪಕ್ಷ ಮಣ್ಣು ಮುಕ್ಕಿಸಿದ ಹಾಗೆ ಬರುವ ದಿನಗಳಲ್ಲಿ ಕರ್ನಾಟಕ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿರುವವರನ್ನು ಮಣ್ಣು ಮುಕ್ಕಿಸಲು ಬಿಜೆಪಿ ಪಕ್ಷ ಸದೃಢವಾಗಿದೆ
ಬೆಳಗಾವಿ ಜಿಲ್ಲೆಯಲ್ಲಿ ಏಕಪಾತ್ರಾಭಿನಯ ನಡೆದಿದೆ ನಮ್ಮವರೇ ನಮಗೆ ಮತ್ತು ಪಕ್ಷಕ್ಕೆ ದ್ರೋಹ ಬಗೆಯುವ ಕಾರ್ಯ ಮಾಡುತ್ತಿದ್ದಾರೆ ಬಿಜೆಪಿದಲ್ಲಿದು ಪಕ್ಷದ ವಿರುದ್ಧ ಕಾರ್ಯ ಮಾಡುವವರನ್ನು ಮತ್ತು ತಮ್ಮ ಸಾರ್ಥಕ್ಕಾಗಿ ಹೊಂದಾಣಿಕೆ ರಾಜಕಾರಣ ಮಾಡುವವರನ್ನು ಇನ್ನು ಮುಂದೆ ಪಕ್ಷ ಸಹಿಸುವದಿಲ್ಲಾ ಅಂತಹವರನ್ನು ಮುಲ್ಲಾಜಿಲ್ಲದೆ ಪಕ್ಷದಿಂದ ಹೊರಹಾಕಲು ದೀಟ್ಟಕ್ರಮ ಕೈಗೋಳಲಾಗುವುದು
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಆದರೆ ಅಷ್ಟಕ್ಕೆ ಸಮಾಧಾನ ಆಗುವುದಿಲ್ಲ. ಗೋಕಾಕದಲ್ಲಿ ಕುಟುಂಬ ರಾಜಕಾರಣ ಕೊನೆಗೊಳಿಸಿ ಬಿಜೆಪಿ ಆಡಳಿತ ತಂದಾಗಲೇ ನಮಗೆ ಸಮಾಧಾನವಾಗುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಗೋಕಾಕ ಸೇರಿ ಬೆಳಗಾವಿ ಜಿಲ್ಲೆಯ ಎಲ್ಲೆಡೆ ಬಿಜೆಪಿ ಗೆಲ್ಲಿಸುವುದೇ ನಮ್ಮ ಗುರಿ. ಇದಕ್ಕಾಗಿ ಕೇಂದ್ರ ಬಿಜೆಪಿ ಸಿದ್ಧಗೊಂಡಿದೆ. ಗೋಕಾಕ್ ಕ್ಷೇತ್ರ ಬಿಜೆಪಿಯವರಿಗೆ ಯಾವ ಲೆಕ್ಕ ಎಂದು ಹೇಳಿದ ಸಚಿವ ಅನಂತಕುಮಾರ ಹೆಗಡೆ, ಗೋಕಾಕದಲ್ಲಿ ಬಿಜೆಪಿ ಧ್ವಜ ಹಾರಿಸಿಯೇ ಸಿದ್ಧ, ಸರ್ವಾಧಿಕಾರಿ ರಾಜಕಾರಣ ಇನ್ನು ಮುಂದೆ ಕೊನೆಗೊಳ್ಳಲಿದೆ ಎಂದ ಅವರು ಗೋಕಾಕ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಚುನಾವಣೆಗಳು ನಡೆದರೆ ಸರಿ, ಇಲ್ಲವಾದರೆ ನಾವೂ ನಿಮ್ಮ ದಾರಿಯನ್ನೇ ತುಳಿಯುತ್ತೇವೆ. ಗೆಲ್ಲುವ ತಂತ್ರಗಳು ನಮಗೂ ಗೊತ್ತು ಎಂದು ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.
ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತಿತರ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್ ಮುಖವಾಡ ಹಾಕಿಕೊಂಡಿದ್ದ ಬಿಎಸ್ಪಿ, ಎಸ್ಪಿ ಮತ್ತಿತರ ಪಕ್ಷಗಳು ಮಣ್ಣು ಮುಕ್ಕಿವೆ. ನಮ್ಮ ಮಂದಿ ಸುಮ್ಮನೆ ಕೂಡ್ರುವುದಿಲ್ಲ. ನಮ್ಮ ಮಂದಿ ಬಂದರೆ ಬುಡವನ್ನೇ ಅಲ್ಲಾಡಿಸುತ್ತಾರೆ ಎಂದು ಅನಂತಕುಮಾರ್ ಹೆಗಡೆ ಹೇಳಿದರು.
ಆಸ್ಸಾಂ, ಮೇಘಾಲಯ ರಾಜ್ಯಗಳಲ್ಲಿ ಒಬ್ಬರೇ ಒಬ್ಬರು ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ. ತಾ.ಪಂ.ಯಿಂದ ಹಿಡಿದು ರಾಜ್ಯ, ರಾಷ್ಟ್ರ ರಾಜಕಾರಣದವರೆಗೆ ಎಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡದ ಮೇಘಾಲಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಮೇಘಾಲಯದಲ್ಲಿ ಬಿಜೆಪಿ ಆಡಳಿತ ಕೆಲವೇ ದಿನಗಳಲ್ಲಿ ಶುರುವಾಗಲಿದೆ ಎಂದು ಸಚಿವರು ಭವಿಷ್ಯ ನುಡಿದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದೂ ರಾಷ್ಟ್ರ ಪರಿಕಲ್ಪನೆಯ ಸರ್ಕಾರಗಳನ್ನು ಅಸ್ತಿತ್ವಕ್ಕೆ ತರುವಲ್ಲಿ ನಾವು ಯಶಸ್ವಿಯಾಗಲಿದ್ದೇವೆ. ಕರ್ನಾಟಕದಲ್ಲಿ ಮೊದಲು ಜಯಭೇರಿ, ಅದಕ್ಕಿಂತ ಹೆಚ್ಚಾಗಿ ಗೋಕಾಕ ಕ್ಷೇತ್ರವೂ ಸೇರಿ ಎಲ್ಲ ಕಡೆ ಬಿಜೆಪಿ ಗೆಲ್ಲಿಸಲು ಎಲ್ಲ ರೀತಿಯಿಂದಲೂ ತಂತ್ರಗಳು ಬಳಕೆಯಾಗಲಿವೆ, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ನಾವೂ ಆರಂಭಿಸೋಣ ಎಂದು ಅನಂತಕುಮಾರ್ ಹೆಗಡೆ ಕಾರ್ಯಕರ್ತರಿಗೆ ತಿಳಿಸಿದರು.
ಬಿಜೆಪಿ ಮುಖಂಡರಾದ ಅಶೋಕ ಪೂಜಾರಿ, ಈರಣ್ಣ ಕಡಾಡಿ, ಶಶಿಧರ ದೇಮಶೆಟ್ಟಿ, ಗುರುಪಾದ ಕಳ್ಳೀ, ಗುರುಪಾದ ಹೊಸಮನಿ , ರಾಜು ಮುನ್ನೋಳಿ , ಬಸವರಾಜ ಹಿರೇಮಠ , ಹೇಮಾ ಭಂಡಾರಿ, ಈಶ್ವರ ಕತ್ತಿ, ಶಾಮಾನಂದ ಪೂಜಾರಿ , ವಿರೂಪಾಕ್ಷಿ ಯಲಿಗಾರ, ಮಾಜಿ ಶಾಸಕ ಎಂ.ಎಲ್ ಮುತ್ತೆಣ್ಣವರ, ಶಕೀಲ್ ಧಾರವಾಡಕರ,ಅಶೋಕ್ ಓಸ್ವಾಲ್ ಇತರರು ಇದ್ದರು.