RNI NO. KARKAN/2006/27779|Monday, February 17, 2025
You are here: Home » breaking news » ಗೋಕಾಕ:ಪೊಲೀಸರು ಜನರ ಆಪ್ತಭಾಂಧವ, ಅಪ್ತರಕ್ಷಕರಾಗಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು : ಎಡಿಜಿಪಿ ಅಲೋಕ ಕುಮಾರ್

ಗೋಕಾಕ:ಪೊಲೀಸರು ಜನರ ಆಪ್ತಭಾಂಧವ, ಅಪ್ತರಕ್ಷಕರಾಗಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು : ಎಡಿಜಿಪಿ ಅಲೋಕ ಕುಮಾರ್ 

ಪೊಲೀಸರು ಜನರ ಆಪ್ತಭಾಂಧವ, ಅಪ್ತರಕ್ಷಕರಾಗಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು : ಎಡಿಜಿಪಿ ಅಲೋಕ ಕುಮಾರ್
ಗೋಕಾಕ ಫೆ : 2 ಪೊಲೀಸರು ಜನರ ಆಪ್ತಭಾಂಧವ, ಅಪ್ತರಕ್ಷಕರಾಗಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ ಅಲೋಕ ಕುಮಾರ್ ಹೇಳಿದರು.

ರವಿವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ 20 ನೇ ಶರಣ ಸಂಸ್ಕೃತಿ ಉತ್ಸವದ ಎರಡನೇ ದಿನದ ಆರಕ್ಷಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರ ಸ್ವರೂಪ ಬದಲಾವಣೆಯಾಗಿದೆ. ತಂತ್ರಜ್ಞಾನದ ಬಳಕೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲಿ ಮೊದಲನೇ ಸ್ಥಾನದಲ್ಲಿದೆ. ಕರ್ನಾಟಕ ಪೊಲೀಸರು ದೇಶದಲ್ಲಿ ದೊಡ್ಡ ಛಾಪು ಮೂಡಿಸಿದ್ದಾರೆ. ಬೆಳಗಾವಿ ಚೆನ್ನಮ್ಮ ನಾಡಿನಲ್ಲಿ ಕೆಲಸ ಮಾಡಿದ ತೃಪ್ತಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸ್ ಕಾರ್ಯಮಾಡಿದರೆ ಹೆಚ್ಚಿನ ಅನುಭವ ಬರುತ್ತದೆ. ನಾವು ಪೊಲೀಸ್ ಆಗಿರುವುದು ನಮ್ಮ ಸ್ವ- ಇಚ್ಚೆಯಿಂದ ಹಾಗಾಗಿ ಪೊಲೀಸರು 24 ಘಂಟೆಗಳ ಕಾಲ ಜನಸೇವೆ ಮಾಡಲು ಸಿದ್ದರಾಗಿರಬೇಕು. ಪೊಲೀಸ್ ಸಿಬ್ಬಂದಿಗಳು ನಕ್ಸಲ್ ರೊಂದಿಗೆ ಹೋರಾಡುವಾಗ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಲವಾರು ಕಠಿಣ ಪ್ರಕರಣಗಳನ್ನು ಪೊಲೀಸರು ತಮ್ಮ ರಚನಾತ್ಮಕ ಕಾರ್ಯದಿಂದ ಬಗೆಹರಿಸಿದ್ದಾರೆ. ಜನರಿಗೆ ಸಮಸ್ಯೆಯಾದಾಗ ಮೊದಲು ಅವರು ಬರುವುದು ಪೊಲೀಸರ ಕಡೆ. ಹಾಗೆ ಬಂದ ಜನರ ಸಮಸ್ಯೆಗಳಿಗೆ ಸ್ವಂದಿಸಿ ಅವರಿಗೆ ಸೂಕ್ತ ನ್ಯಾಯವನ್ನು ನೀಡುವದರೊಂದಿಗೆ ಅವರಿಗೆ ಆಪ್ತ ರಕ್ಷಕನಾಗಬೇಕು ಎಂದ ಅವರು ಸಮಾಜ ರಕ್ಷಕ ಪೊಲೀಸರನ್ನು ಗೌರವಿಸಬೇಕು,ಪೊಲೀಸರು ಮನೆಯಲ್ಲಿ ಮದುವೆ, ಇನ್ನಿತರ ಹಬ್ಬ ಹರಿದಿನಗಳಲ್ಲಿ ರಜೆಕೊಡಲು ಆಗುವುದಿಲ್ಲ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವವರನ್ನು ಮಟ್ಟಹಾಕಬೇಕು. ಶಿಸ್ತುನ್ನು ಮೈಗೂಡಿಸಿಕೊಂಡು ಪೊಲೀಸರು ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡಬೇಕು‌. ಶ್ರೀ ಶೂನ್ಯ ಸಂಪಾದನ ಮಠ ಎಲ್ಲಾ ವರ್ಗದವರನ್ನು ಗೌರವಿಸುತ್ತಿರುವುದು ಅತ್ಯಂತ ಮಹಾನ ಕಾರ್ಯವಾಗಿದ್ದು, ಶಿಕ್ಷಣದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ ಶ್ರೀ ಮಠದಿಂದ ಹತ್ತು ಹಲವು ಸತ್ಕಾರ್ಯಗಳು ನೆರವೇರಲಿ ಎಂದು ಹಾರೈಸಿದ ಅವರು ಬೆಳಗಾವಿ ಜಿಲ್ಲೆ ಸಹೃದಯಿ ಜನರ ಸಹಕಾರದಿಂದ ಪೊಲೀಸ್ ವ್ಯವಸ್ಥೆಯನ್ನು ಕಲಿತಿದ್ದೇನೆ. ಆರಕ್ಷಕರ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಆರಕ್ಷಕರ ಸಮಾವೇಶ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಬೈಲೂರು ನಿಷ್ಕಲಮಂಟಪದ ಶ್ರೀ ನಿಜಗುಣನಫ್ರಭು ಮಹಾಸ್ವಾಮಿಗಳು ಖಾಕಿ, ಖಾದಿ, ಖಾವಿ ದೇಶದಲ್ಲಿ ಬಳಹ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿಬೇಕು. ಈ ಮೂರು ವರ್ಗದವರು ಸ್ವಲ್ಪ ಎಡವಿದರೆ ದೇಶವೇ ಅಲ್ಲೋಲ ಕಲ್ಲೋಲವಾಗುತ್ತದೆ. ಖಾಕಿ ರಕ್ಷಣೆ ಕುರುವಾಗಬೇಕು ಭಕ್ಷಣೆಯ ಕೂರುವಾಗಬಾರದು, ಖಾವಿಗಳು ತ್ಯಾಗಿಗಳಾಗಬೇಕು, ಬೋಗಿಗಳಾಗಬಾರದು, ರಾಜಕಾರಣಿಗಳು ಸೇವಕರಾಗಬೇಕು ಭ್ರಷ್ಟರಾಗಬಾರದು. ಧಾರ್ಮಿಕ ಮುಖಂಡರ ಮಾತು, ರಾಜಕಾರಣಿಗಳ ನಡೆ, ಆರಕ್ಷಕರ ಕಾನೂನು ರಕ್ಷಣೆ ಇತರರಿಗೆ ಮಾದರಿಯಾಗಬೇಕು. ಎಲ್ಲ ಮಹಾತ್ಮರು ದೇವರ ಮತ್ತು ಧರ್ಮದ ಮಾತುಗಳನ್ನಾಡಿದರೆ ಬಸವಣ್ಣವರು ಮನುಷ್ಯನ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ನಾವು ನಮ್ಮ ವರ್ತನೆಗಳಿಂದ ಪರಿವರ್ತನೆಯಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸತ್ಕರಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಚಿಕ್ಕೋಡಿಯ ಡಿ.ವಾಯ್.ಎಸ್.ಪಿ ಗೋಪಾಲಕೃಷ್ಣ ಗೌಡರ, ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಕೋಟಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರುಗಳಾದ ಆರ್.ಎಲ್.ಮಿರ್ಜಿ, ಎಸ್.ಕೆ .ಮಠದ ನಿರೂಪಿಸಿ,ವಂದಿಸಿದರು.

Related posts: