RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು : ತಹಶೀಲ್ದಾರ ಡಾ.ಮೋಹನ್ ಭಸ್ಮೆ

ಗೋಕಾಕ:ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು : ತಹಶೀಲ್ದಾರ ಡಾ.ಮೋಹನ್ ಭಸ್ಮೆ 

ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು : ತಹಶೀಲ್ದಾರ ಡಾ.ಮೋಹನ್ ಭಸ್ಮೆ

ಗೋಕಾಕ ಜ 26 : ನಾವೆಲ್ಲರೂ ಸಂವಿಧಾನದ ಆದರ್ಶಗಳನ್ನು ತಪ್ಪದೆ ಪಾಲಿಸಬೇಕು ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.

ರವಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು.

ಸಂವಿಧಾನ ಮೌಲ್ಯಗಳನ್ನು ನಾವು ತಿಳಿಯಬೇಕು, ಬೇರೆಯವರ ಆಸೆಗೆ ಅನುಗುಣವಾಗಿ ಜೀವನವನ್ನು ನಡೆಸದೆ. ಸಂವಿಧಾನದ ಆಸೆಯಂತೆ ನಾವು ನಮ್ಮ ಜೀವನವನ್ನು ನಡೆಸಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಪರಿಸರದ ಕಾಳಜಿ ಬಗ್ಗೆ ಹೆಚ್ಚಿನ ಮಹತ್ವ ನೀಡಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಿ ಪರಿಸರವನ್ನು ಕಾಪಾಡಬೇಕು. ಕುಟುಂಬದ ವ್ಯವಸ್ಥೆಯ ಜೊತೆಗೆ ದೇಶದ ಸಾರ್ವಭೌಮವನ್ನು ಎತ್ತಿ ಹಿಡಿಯಬೇಕು. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ತೊಡುಗುಗಳನ್ನು ಮೀರಿ ಬೆಳೆಯಬೇಕು. ನಾವು ಕಂಡು ಹಿಡಿದ ತಂತ್ರಜ್ಞಾನಗಳನ್ನು ನಾವು ಎಷ್ಟು ಸದುಪಯೋಗ ಪಡೆಸಿಕೊಳ್ಳುತ್ತಿದ್ದೇವೆ ಎಂದು ಯೋಚಿಸಿ ನಾವು ಮುಂದೆ ನಡೆಯಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಸ್ವರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷೆ ಶ್ರೀಮತಿ ಬಿಬಿಬತುಲ್ ಜಮಾದಾರ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಯಕ್ಕುಂಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ಬಿಇಒ ಜಿ.ಬಿ.ಬಳಗಾರ, ಪೌರಾಯುಕ್ತ ರಮೇಶ ಜಾಧವ್, ಸಿಪಿಐ ಸುರೇಶ್ ಬಾಬು, ಕೃಷಿ ಅಧಿಕಾರಿ ಎಂ.ಎಂ.ನಧಾಫ್, ಏಂ.ಎಚ್.ಗಜಾಕೋಶ, ಬಿ.ಆರ್.ಕೊಪ್ಪ, ಅಶೋಕ್ ಪೂಜಾರಿ, ಮಹಾಂತೇಶ ಕಡಾಡಿ, ನಗರಸಭೆ ಸದಸ್ಯರುಗಳಾದ ಯೂಸುಫ್ ಅಂಕಲಗಿ, ಬಾಬು ಮುಳಗುಂದ, ಕರವೇ ಮುಖಂಡರುಗಳಾದ ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಮುಖಂಡರುಗಳಾದ ಬಸವರಾಜ ದೇಶನೂರ, ಅಬ್ದುಲವಹಾಬ ಜಮಾದಾರ, ಸೋಮಶೇಖರ್ ಮಗದುಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: