ಬೆಳಗಾವಿ:ಎಂಇಎಸ ಕರಾಳ ದಿನಾಚರಣೆಗೆ : ಜಿಲ್ಲಾಡಳಿತ ಅನುಮತಿ
ಎಂಇಎಸ ಕರಾಳ ದಿನಾಚರಣೆಗೆ : ಜಿಲ್ಲಾಡಳಿತ ಅನುಮತಿ
ಬೆಳಗಾವಿ ಅ 28: ರಾಜ್ಯೋತ್ಸವ ದಿನ ರಾಜ್ಯ ವಿರೋಧಿ ಕರಾಳ ದಿನಾಚರಣೆ ನಡೆಸುವ ಎಂಇಎಸ್ ಗೆ ಜಿಲ್ಲಾಡಳಿತ ಕೊನೆಗೂ ಅನುಮತಿ ನೀಡಿರುವುದು ಗಮನಕ್ಕೆ ಬಂದಿದೆ. ನ.1 ರಂದು ರಾಜ್ಯೋತ್ಸವ ಮತ್ತು ಎಂಇಎಸ್ ನ ರ್ಯಾಲಿ ಚಟುವಟಿಕೆಗಳನ್ನು ಗಮನಿಸಲು ಐವರು ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಪತ್ರಿಕಾ ಪ್ರಕಟನೆ ಮೂಲಕ ಆದೇಶ ಹೊರಡಿಸಿದ್ದಾರೆ.
ಎಂಇಎಸ್ ನಡೆಸಲುದ್ದೇಶಿಸಿರುವ ಕರಾಳ ದಿನಾಚರಣೆಗೆ ಪ್ರತಿವರ್ಷದಂತೆ ಹೆಚ್ಚಿನ ಆಕ್ಷೇಪನೆಯಿಲ್ಲದೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅನುಮತಿ ನೀಡಿದಂತಾಗಿದೆ. ಪೊಲೀಸ್ ಇಲಾಖೆ ಷರತ್ತುಬದ್ಧ ಅನುಮತಿ ನೀಡಿರುವುದರಿಂದ ಎಂಇಎಸ್ ಕಾರ್ಯಕರ್ತರ ಬೈಕ್ ರ್ಯಾಲಿ ನಡೆಯುವುದು ಖಚಿತವಾಗಿದೆ.