RNI NO. KARKAN/2006/27779|Tuesday, December 3, 2024
You are here: Home » breaking news » ಗೋಕಾಕ:ಬೀದಿ ನಾಯಿಗಳ ಉಪಟಳಕ್ಕೆ ಬೇಸತ್ತ ಜನ . ಮಹಿಳೆಯರು, ಶಾಲಾ ಮಕ್ಕಳಲ್ಲಿ ಆತಂಕ | ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಹಿಡಿಶಾಪ

ಗೋಕಾಕ:ಬೀದಿ ನಾಯಿಗಳ ಉಪಟಳಕ್ಕೆ ಬೇಸತ್ತ ಜನ . ಮಹಿಳೆಯರು, ಶಾಲಾ ಮಕ್ಕಳಲ್ಲಿ ಆತಂಕ | ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಹಿಡಿಶಾಪ 

ಬೀದಿ ನಾಯಿಗಳ ಉಪಟಳಕ್ಕೆ ಬೇಸತ್ತ ಜನ . ಮಹಿಳೆಯರು, ಶಾಲಾ ಮಕ್ಕಳಲ್ಲಿ ಆತಂಕ | ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಹಿಡಿಶಾಪ
ನಗರದ ವಿವಿಧ ಗಲ್ಲಿ ಗಲ್ಲಿಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಿಳೆಯರು, ಶಾಲಾಮಕ್ಕಳು, ವಯೋವೃದ್ಧರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ. ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳು ಕೆಲವು ಸಲ ಬೈಕ್ ಸವಾರರ ಮೇಲೂ ದಾಳಿ ಮಾಡುತ್ತಿವೆ. ನಗರದ ಮುಖ್ಯರಸ್ತೆಯಲ್ಲಿರುವ. ರಿಲಯನ್ಸ್ ಮಾರ್ಟ್ ನ ಮುಂದೆ ಇರುವ ರಸ್ತೆ ವಿಭಜಕದ ಮೇಲಿನಿಂದ ಜಿಗಿಯುವ ನಾಯಿಗಳು ಹಲವು ಬೈಕ್ ಸವಾರರನ್ನು ಬಿಳಿಸಿ ಗಂಭೀರ ಗಾಯಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ನಾಯಿಗಳಿಂದ ತಪ್ಪಿಸಿಕೊಳ್ಳವ ಭಯದಲ್ಲಿ ಸವಾರರು ಬೈಕನಿಂದ ಬಿದ್ದ ನಿದರ್ಶನಗಳು ಸಹ ನಗರದಲ್ಲಿ ಹಲವಾರಿವೆ. ಬೀದಿ ನಾಯಿಗಳ ನಿಯಂತ್ರಣ ಮಾಡಬೇಕಾದ ನಗರಸಭೆ ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದ ಮಾರ್ಕಂಡೇಯ ನಗರ, ಯೋಗಿ ಕೊಳ್ಳ ರಸ್ತೆ, ವಿವೇಕಾನಂದ ನಗರ, ವಾಲ್ಮೀಕಿ ಕ್ರೀಡಾಂಗಣ, ಆದಿಜಾಂಬವ ನಗರ, ಅಂಬೇಡ್ಕರ್ , ಮಟನ್ ಮಾರ್ಕೆಟ್, ಆಶ್ರಯ ಬಡಾವಣೆ ಸೇರಿದಂತೆ ನಗರಾದ್ಯಂತ ಬೀದಿ ನಾಯಿಗಳು ಕಾಟಕ್ಕೆ ಜನ ಬೆಸತ್ತಿದ್ದಾರೆ. ನಗರದ ವಾರ್ಡ ನಂ 18ರಲ್ಲಿ 6 ಜನರು ಬೀದಿನಾಯಿಗಳ ದಾಳಿಗೆ ಗುರಿಯಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ವಾರ್ಡ ನಂ 21 ಅಂಬೇಡ್ಕರ್ ನಗರದಲ್ಲಿ ಗುರುವಾರದಂದು ಮಧ್ಯಾಹ್ನ 2 ಘಂಟೆಯ ಸುಮಾರಿಗೆ ಶ್ರೀಮತಿ ಬೇಗಂ ನಧಾಪ ಎಂಬುವವರಿಗೆ ನಾಲ್ಕು ಬೀದಿನಾಯಿಗಳು ದಾಳಿ ಮಾಡಿ ಮುಖಕ್ಕೆ ಗಂಭೀರಗಾಯ ಮಾಡಿವೆ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದೆ. ಹೀಗೆ ಹಲವು ಪ್ರಕರಣಗಳು ನಗರದಲ್ಲಿ ನಡೆಯುತ್ತಿದ್ದರೂ ಸಹ ನಗರಸಭೆ ಅಧಿಕಾರಿಗಳು ಟೆಂಡರ್ ಹಾಕಿದರು ಯಾರ ಬರುತ್ತಿಲ್ಲ ಎಂದು ನೇಪ ಹೇಳಿ, ಕಾನೂನು ಹೇಳಿ ಜಾರಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ಹೀಗೆ ನಗರದ ಪ್ರಮುಖ ಬೀದಿಗಳಲ್ಲಿ ಬೀದಿನಾಯಿಗಳ ಕಾಟ್ ಅಧಿಕವಾಗಿದ್ದು, ರಸ್ತೆಗಳಲ್ಲಿ ಮಹಿಳೆಯರು, ವಯೋವೃದ್ಧರು ವಾಯು ವಿಹಾರ ಮಾಡಲು ಹಿಂದೇಟು ಹಾಕುವಂತಾಗಿದೆ. ಚಿಕ್ಕ ಮಕ್ಕಳು ಅಂಗಡಿ ಇತರೆ ಕೆಲಸಗಳಿಗೆ ಹೊರ ಹೋಗಲು ಬೀದಿನಾಯಿಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳನ್ನು ಶಾಲೆಗೆ ಬಿಡುವ ಮಹಿಳೆಯರು, ಬೈಕ್ ಮೇಲೆ ತೆರಳುವ ಪಾಲಕರು ಆತಂಕದಿಂದಲೇ ಸಂಚರಿಸುತ್ತಿದ್ದಾರೆ. ಬೀದಿ ನಾಯಿ ಗಳು ಬೈಕ್ ಸವಾರರು, ಚಿಕ್ಕಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ರಾತ್ರಿ ವೇಳೆ ವಿವಿಧ ವಾರ್ಡ್, ಕಾಲೋನಿಗಳಲ್ಲಿ ಬೀದಿ ನಾಯಿಗಳು ಉಪಟಳ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲೂ ನಾಯಿಗಳ ಕಾಟ ವಿಪರೀತವಾಗಿದ್ದೆ ಇವುಗಳನ್ನು ನಿಯಂತ್ರಿಸುವುದು ನಗರಸಭೆಗೆ ದೊಡ್ಡ ಸವಾಲಾಗಿದೆ.
ನಗರದಲ್ಲಿ ಬೀದಿ ನಾಯಿಗಳ ಉಪಟಳಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ಭಯದಿಂದಲೇ ಸಂಚರಿಸುತ್ತಿದ್ದಾರೆ. ರಾತ್ರಿ ವೇಳೆ ನಿದ್ದೆಗೆಡಿಸುತ್ತಿರುವ ಈ ನಾಯಿಗಳ ಹಾವಳಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ನಗರದ ಎಲ್ಲಾ ವಾರ್ಡಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ , ಬಸ್ ನಿಲ್ದಾಣ ರಸ್ತೆಯಲ್ಲಿ ಹಿಂಡು ಹಿಂಡಾಗಿ ಬೀದಿನಾಯಿಗಳು ಓಡಾಡುತ್ತಿರುತ್ತವೆ. ಅಂಗಡಿಗಳು, ಸಾರ್ವಜನಿಕ ಸ್ಥಳ, ಕಸದ ತೊಟ್ಟಿಯಲ್ಲಿ, ತ್ಯಾಜ್ಯ ಹಾಕುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬುದು ಸ್ಥಳೀಯರ ಆರೋಪ.

ನಿಯಂತ್ರಣಕ್ಕೆ ಕ್ರಮವಿಲ್ಲ: ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಸಲು ಅನೇಕ ವರ್ಷಗಳಿಂದ ಪಶು ಸಂಗೋಪನಾ ಇಲಾಖೆ ಯಿಂದ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡದೇ ಇರುವುದು ಮತ್ತು ಇವುಗಳ ನಿಯಂತ್ರಣಕ್ಕೆ ನಗರಸಭೆ ಕ್ರಮ ಕೈಗೊಳ್ಳದೆ ಇರುವುದರಿಂದ ಇತ್ತೀಚೆಗೆ ಅವುಗಳ ಉಪಟಳ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ಆಡಳಿತ ಚುರುಕಾಗಲಿ: ನಗರಸಭೆ ಅವರು , ಪಶು ಸಂಗೋಪನ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೀದಿ ನಾಯಿಗಳು ಹಾವಳಿಗೆ ನಿಯಂತ್ರಣ ಹಾಕಲು ಕ್ರಮ ಕೈಗೊಳ್ಳಬೇಕು. ನಿಯಂತ್ರಣ ಜೊತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಹಾಗೂ ಕಡಿತಕ್ಕೆ ಒಳಗಾದರೆ ಚುಚ್ಚುಮದ್ದು ಹಾಕಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.

“ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ದೂರುಗಳು ಬಂದಿವೆ. ಒಂದೆರಡು ದಿನಗಳಲ್ಲಿ ಟೆಂಡರ್‌ಕರೆದು ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರು ಸಹ ದಾಳಿಗೆ ಒಳಗಾಗದಂತೆ ಎಚ್ಚರಿಕೆಯಿಂದ ಇರಬೇಕು”.

– ರಮೇಶ ಜಾಧವ್ ಪೌರಾಯುಕ್ತರು ಗೋಕಾಕ

“ಈಗಾಗಲೇ ನಗರಸಭೆ ವತಿಯಿಂದ ಟೆಂಡರ ಕರೆಯಲಾಗಿದ್ದು, ಟೆಂಡರ ಪಡೆದ ಸಂಸ್ಥೆಯವರೆ ಅವುಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬೇಕು. ಈಗಾಗಲೇ ಈ ಕುರಿತು ನಗರಸಭೆ ಅಧಿಕಾರಿಗಳು ಜೊತೆ ಚರ್ಚಿಸಿದ್ದೇವೆ. ನಾಯಿಗಳನ್ನು ಹಿಡಿದು ತಂದರೆ ಪಶು ಇಲಾಖೆ ವತಿಯಿಂದ ಉಚಿತವಾಗಿ ರೆಬಿಸ್ ಲಸಿಕೆ ಹಾಕಲಾಗುವುದು”.

* ಡಾ. ಮೋಹನ್ ಕಮತ್. ಪಶು ಸಂಗೋಪಣಾ ಇಲಾಖೆ

Related posts: