ಗೋಕಾಕ:ಡಿಸೆಂಬರ್ 15 ಕ್ಕೆ ತಾಲೂಕು ಕೃಷಿಕ ಸಮಾಜದ ಚುನಾವಣೆ : ಎಂ ಎಂ ನಧಾಪ
ಡಿಸೆಂಬರ್ 15 ಕ್ಕೆ ತಾಲೂಕು ಕೃಷಿಕ ಸಮಾಜದ ಚುನಾವಣೆ : ಎಂ ಎಂ ನಧಾಪ
ಗೋಕಾಕ ನ 27 : ತಾಲೂಕಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ 5 ವರ್ಷದ ಅವಧಿಗೆ ಕಾರ್ಯಕಾರಿ ಸಮಿತಿ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಡಿಸೆಂಬರ್ 15 ರಂದು ತಾಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ ನಡೆಯಲಿದೆ. ಆಜೀವ ಸದಸ್ಯರ ಪಟ್ಟಿ ಸಹಾಯಕ ಕೃಷಿ ನಿರ್ದೆಶಕರ ಗೋಕಾಕ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ನವೆಂಬರ್ 30 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ . ಡಿಸೆಂಬರ್ 15 ರ ಬೆಳಿಗ್ಗೆ 8 ರಿಂದ 3 ಗಂಟೆ ವರೆಗೆ ಚುನಾವಣೆ ನಡೆಯಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.