ಗೋಕಾಕ:ಅಕ್ಕ ಮಹಾದೇವಿ ಮಹಿಳಾ ವಚನ ಸಾಹಿತ್ಯದ ಮೇರುಪರ್ವತ : ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ

ಅಕ್ಕ ಮಹಾದೇವಿ ಮಹಿಳಾ ವಚನ ಸಾಹಿತ್ಯದ ಮೇರುಪರ್ವತ : ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ
ಗೋಕಾಕ ನ 14 : ಅಕ್ಕ ಮಹಾದೇವಿ ಮಹಿಳಾ ವಚನ ಸಾಹಿತ್ಯದ ಮೇರುಪರ್ವತ ಎಂದು ನದಿಇಂಗಳಗಾಂವದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು
ಗುರುವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ,ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ,ಮಂಥನ ವೇದಿಕೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 181ನೇ ಶಿವಾನುಭವಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಕ್ಕಮ್ಮ, ಕಾಳವ್ವೆ, ನೀಲವ್ವ, ಲಕ್ಷ್ಮವ್ವರಂತಹ ಶರಣೆಯರು ವಚನಗಳನ್ನು ರಚಿಸಿದ್ದಾರೆ. ಇವರು ಮೂಢನಂಬಿಕೆ ವಿರುದ್ಧ ಹೋರಾಟ ನಡೆಸಿದ ಧೀರ ವನಿತೆಯರು. ಅವರ ಆದರ್ಶಗಳನ್ನು ಇಂದಿನ ಮಹಿಳೆಯರು ಬೆಳೆಸಿಕೊಳ್ಳಬೇಕು. ಈ ಪ್ರಪಂಚದಲ್ಲಿ ಜನಿಸಿ ಬಂದ ಮೇಲೆ ಒಳ್ಳೆಯದು- ಕೆಟ್ಟದು, ಬೇಕು-ಬೇಡದ್ದು, ಹೊಗಳಿಕೆ-ತೆಗಳಿಕೆ ಇವೆಲ್ಲ ಬಂದಾಗ ಸಿಟ್ಟಾಗದೆ, ಕೋಪಿಸಿಕೊಳ್ಳದೆ, ಬೇಸರಮಾಡದೆ ಸಮಾಧಾನಿಯಾಗಿರಬೇಕು. ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಂಡಿರಬೇಕು ಎಂದ ಅವರು ಮಾನವ ಜೀವನದಲ್ಲಿ ಸದ್ಗುಣಗಳು ಇರಬೇಕು. ಗಳಿಸಿದ್ದನ್ನು ಕೊಟ್ಟು ಸಾಯಿಬೇಕು ವಿನ್ಹ ಇಟ್ಟು ಸಾಯಬಾರದು ಗಳಿಸಿದ ಸಂಪತ್ತುನ್ನು ಸರಿಯಾಗಿ ಸದ್ಬಳಕೆ ಮಾಡಕೊಂಡು ಪರರಿಗೆ ಉಪಯೋಗ ಆಗುವ ರೀತಿಯಲ್ಲಿ ಬಾಳಿ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಖಾನಪ್ಪನವರ, ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಬಿ.ಪ್ರಭಾರಕರ ಹಾಗೂ ಅಪರ್ಣಾ ನಿರೂಪಣ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎಲ್. ಮಿರ್ಜಿ ಅವರನ್ನು ಶ್ರೀಮಠದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಎಮ್.ಎಸ್.ಯಕ್ಸಂಬಿ, ಶ್ರೀಮತಿ ಅನಸೂಯಾ ಪಾಟೀಲ, ಶ್ರೀಕಾಂತ್ ಹಳ್ಳೂರ ಉಪಸ್ಥಿತರಿದ್ದರು.