ಗೋಕಾಕ:ಮಹಾಲಕ್ಷ್ಮೀ ಕೋ – ಆಪರೇಟಿವ್ಹ ಕ್ರೆಡಿಟ್ ಬ್ಯಾಂಕ್ ಲಿ. ಕಾರ್ಯ ಇತರರಿಗೆ ಮಾದರಿ : ಖಾನಪ್ಪನವರ
ಮಹಾಲಕ್ಷ್ಮೀ ಕೋ – ಆಪರೇಟಿವ್ಹ ಕ್ರೆಡಿಟ್ ಬ್ಯಾಂಕ್ ಲಿ. ಕಾರ್ಯ ಇತರರಿಗೆ ಮಾದರಿ : ಖಾನಪ್ಪನವರ
ಗೋಕಾಕ ಜು 16 : ಸಹಕಾರಿ ರಂಗದಲ್ಲಿ ಕರ್ನಾಟಕದಲ್ಲಿ ಪ್ರಥಮವಾಗಿ ಎ.ಟಿ.ಎಮ್ ಸೌಲಭ್ಯ , ಪಾಸ್ ಬುಕ್ ಮುದ್ರಣ ಯಂತ್ರ , ಚೆಕ್ ಸ್ವೀಕರಿಸಿಸುವ ಯಂತ್ರ , ಹಣ ಸ್ವೀಕರಿಸಿಸುವ ಯಂತ್ರ ಸೇರಿದಂತೆ ಅನೇಕ ಅತ್ಯಾಧುನಿಕ ಸೇವೆಗಳನ್ನು ಪರಿಚಯಿಸಿರುವ ನಗರದ ಮಹಾಲಕ್ಷ್ಮೀ ಕೋ – ಆಪರೇಟಿವ್ಹ ಕ್ರೆಡಿಟ್ ಬ್ಯಾಂಕ್ ಲಿ. ಕಾರ್ಯ ಇತರರಿಗೆ ಮಾದರಿ ಎಂದು ಕರವೇ ಅಧ್ಯಕ್ಷ ಹಾಗೂ ಮಾರಿಕಾಂಬಾ ಚೀಟ್ ಪಂಡ್ ನ ವವ್ಯಸ್ಥಾಪಕ ನಿರ್ದೇಶಕ ಬಸವರಾಜ ಖಾನಪ್ಪನವರ ಹೇಳಿದರು
ಸೋಮವಾರದಂದು ನಗರದ ಮಹಾಲಕ್ಷ್ಮಿ ಬ್ಯಾಂಕ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸ್ಥೆಯ ವೈಸ್ ಚೇರಮನ್ ಜಿತೇಂದ್ರ ಮಾಂಗಳೇಕರ ಅವರನ್ನು ಸತ್ಕರಿಸಿ ಅವರು ಮಾತನಾಡಿದರು
ಈ ಸಂದರ್ಭದಲ್ಲಿ ರಾಜು ಕೆಂಚನಗುಡ್ಡ ಮಹಾಂತಯ್ಯ ಹಿರೇಮಠ , ಬಾಹುಬಲಿ ಖಾರೇಪಾಠಣ , ನಾರಾಯಣ ವಾಗುಲೆ , ರಾಜೇಶ ಹುಳ್ಳಿ ,ಸಿಬ್ಬಂದಿಗಳಾದ ಶ್ಯಾಮಲಾ ಹುಬ್ಬಳಿಕರ , ವಿದ್ಯಾ ದಾಬಿಮಠ , ನಾಗರಾಜ ಕಳ್ಳಿಮನಿ , ಮಂಜುನಾಥ ಖಾನಪ್ಪನವರ , ಮಹಾಂತೇಂಶ ದಾಬಿಮಠ , ಜಾಪರ ಕಮತ , ಪವನ ಆಶಿ , ಮಲ್ಲು ಗುಂಡಕಲ್ಲಿ , ರಮೇಶ ಬಿ ಕೆ ಸೇರಿದಂತೆ ಇತರರು ಉಪಸ್ಥಿತರಿದರು