ಗೋಕಾಕ:ಭೂ ನ್ಯಾಯ ಮಂಡಳಿಗೆ ನೇಮಕ
ಭೂ ನ್ಯಾಯ ಮಂಡಳಿಗೆ ನೇಮಕ
ಗೋಕಾಕ ಅ 8 : ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಶಿಪಾರಸ್ಸು ಮೇರೆಗೆ ಇಲ್ಲಿನ ಭೂ ನ್ಯಾಯ ಮಂಡಳಿಗೆ ಸದಸ್ಯರನ್ನಾಗಿ ಗುಜನಾಳಿನ ಬಾಳಗೌಡ ಪಾಟೀಲ, ಪಾಮಲದಿನ್ನಿಯ ಮಾರುತಿ ವಿಜಯನಗರ, ಮಲ್ಲಾಪೂರ ಪಿ.ಜಿ.ಯ ಗೀತಾ ತಲ್ಲಳಿ, ಮಮದಾಪೂರದ ನಾಗಪ್ಪ ಸಿದ್ನಾಳ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ತಹಶೀಲ್ದಾರ ಅವರನ್ನು ನಾಮನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದೆ.