ಗೋಕಾಕ:ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ವರ್ಗಾವಣೆ : ನೂತನ ವಲಯ ಅರಣ್ಯಾಧಿಕಾರಿಯಾಗಿ ಆನಂದ ಹೆಗಡೆ ಅಧಿಕಾರ ಸ್ವೀಕಾರ

ವಲಯ ಅರಣ್ಯಾಧಿಕಾರಿ ಸಂಜೀವ ಸಂಸುದ್ದಿ ವರ್ಗಾವಣೆ : ನೂತನ ವಲಯ ಅರಣ್ಯಾಧಿಕಾರಿಯಾಗಿ ಆನಂದ ಹೆಗಡೆ ಅಧಿಕಾರ ಸ್ವೀಕಾರ
ಗೋಕಾಕ ಅ 6 : ಇಲ್ಲಿನ ವಲಯ ಅರಣ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜೀವ ಸಂಸುದ್ದಿ ಅವರು ವರ್ಗಾವಣೆಗೊಂಡ ಕಾರಣ ಅವರಿಂದ ತೆರವಾದ ಸ್ಥಾನಕ್ಕೆ ಆನಂದ ಹೆಗಡೆ ಅವರು ನೂತನ ವಲಯ ಅರಣ್ಯ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಆನಂದ ಹೆಗಡೆ ಕಳೆದ ಎರೆಡು ವರ್ಷಗಳಿಂದ ಗೋಕಾಕ ಸಮಾಜಿಕ ಅರಣ್ಯ ವಿಭಾಗದಲ್ಲಿ ವಲಯ ಅರಣ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿ ಗೋಕಾಕ ವಲಯವನ್ನು ಅತ್ಯುತ್ತಮ ವಲಯವನ್ನಾಗಿಸಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಕೊಳವಿ, ವಾಸೀಮ ಬಾಂಗಿ , ನರಸಿಂಹ ಈರಯ್ಯನವರ, ಸಂಜು ನಾಯಕ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.