RNI NO. KARKAN/2006/27779|Wednesday, March 18, 2026
You are here: Home » breaking news » ಗೋಕಾಕ:ಪ್ರವಾಹ ಹಿನ್ನೆಲೆ : ಗೋಕಾಕ -ಸಂಕೇಶ್ವರ ರಾಜ್ಯ ಹೆದ್ದಾರಿ ನಡುವಿನ ಲೋಳಸೂರ ಸೇತುವೆ ಮುಳುಗಡೆ : ಸಂಚಾರ ಸಂಪೂರ್ಣ ಬಂದ್

ಗೋಕಾಕ:ಪ್ರವಾಹ ಹಿನ್ನೆಲೆ : ಗೋಕಾಕ -ಸಂಕೇಶ್ವರ ರಾಜ್ಯ ಹೆದ್ದಾರಿ ನಡುವಿನ ಲೋಳಸೂರ ಸೇತುವೆ ಮುಳುಗಡೆ : ಸಂಚಾರ ಸಂಪೂರ್ಣ ಬಂದ್ 

ಪ್ರವಾಹ ಹಿನ್ನೆಲೆ : ಗೋಕಾಕ -ಸಂಕೇಶ್ವರ ರಾಜ್ಯ ಹೆದ್ದಾರಿ ನಡುವಿನ ಲೋಳಸೂರ ಸೇತುವೆ ಮುಳುಗಡೆ : ಸಂಚಾರ ಸಂಪೂರ್ಣ ಬಂದ್

default

ಗೋಕಾಕ ಜು 26 : ಘಟಪ್ರಭಾ ನದಿಯ ಪ್ರವಾಹ ಹೆಚ್ಚಿದ ಹಿನ್ನೆಲೆಯಲ್ಲಿ ನಗರದ ಗೋಕಾಕ -ಸಂಕೇಶ್ವರ ರಾಜ್ಯ ಹೆದ್ದಾರಿ ನಡುವಿನ ಲೋಳಸೂರ ಸೇತುವೆ ಸಾಯಂಕಾಲ ಮುಳುಗಡೆಯಾಗಿ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಹಿಡಕಲ್ ಜಲಾಶಯದಿಂದ 40 ಸಾವಿರ, ಹಿರಣ್ಥಕೇಶಿ ನದಿಗೆ 23 ಸಾವಿರ, ಮಾರ್ಕಂಡೇಯ ನದಿಗೆ 7,400 ಸಾವಿರ, ಬಳ್ಳಾರಿ ನಾಲಾದಿಂದ 3 ಸಾವಿರ ಕ್ಯೂಸೆಕ್ಸ ಒಟ್ಟು 73 ಸಾವಿರ ಕ್ಯೂಸೆಕ್ಸ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿರುವ ಪರಿಣಾಮ ನಗರದ ಹಳೆ ದನಗಳ ಪೇಠೆ, ಕುಂಬಾರ ಓಣಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಅಧಿಕಾರಿಗಳು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿನೀಡಿ ಸಾರ್ವಜನಿಕರು ನದಿ ತೀರದಲ್ಲಿ ತೆರಳದಂತೆ ಸೂಕ್ತ ಕ್ರಮ ಕೈಗೊಂಡಿದ್ದಾರೆ.

Related posts: