ಗೋಕಾಕ:ಪೊಲೀಸರ ಬೃಹತ್ ಬೇಟೆ , ಜೂಜಾಟ ಅಡ್ಡೆ ಮೆಲೆ ದಾಳಿ 61 ಜನರ ಬಂಧನ 3 ಲಕ್ಷಕ್ಕೂ ಹೆಚ್ಚು ನಗದು ವಶ
ಪೊಲೀಸರ ಬೃಹತ್ ಬೇಟೆ , ಜೂಜಾಟ ಅಡ್ಡೆ ಮೆಲೆ ದಾಳಿ 61 ಜನರ ಬಂಧನ 3 ಲಕ್ಷಕ್ಕೂ ಹೆಚ್ಚು ನಗದು ವಶ
ಗೋಕಾಕ ಅ 21: ದೀಪಾವಳಿ ಹಬ್ಬದ ನೆಪ ಮಾಡಿ ನಗರದ ಕ್ಲಬ್‍ವೊಂದರಲ್ಲಿ ಜೂಜಾಡುವವರ
ಮೇಲೆ ಶುಕ್ರವಾರ ರಾತ್ರಿ ಜಿಲ್ಲಾ ಪೊಲೀಸರು ದಾಳಿ ನಡೆಸಿ 61 ಜನರನ್ನು ಬಂಧಿಸಿ ಸುಮಾರು 3 ಲಕ್ಷಕ್ಕೂ ಹೆಚ್ಚು ರೂ. ನಗದು ಮತ್ತು 30 ಕ್ಕೂ ಹೆಚ್ಚು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋಕಾಕ ಇತಿಹಾಸದಲ್ಲಿಯೇ ಇದೊಂದು ಬೃಹತ್ ಪ್ರಮಾಣದ ದಾಳಿಯಾಗಿದ್ದು ಬಂಧಿತರಲ್ಲಿ ಪ್ರತಿಷ್ಠಿತ ಕುಟುಂಬದ ಸದಸ್ಯರೂ ಇದ್ದಾರೆ ಎಂದು ಗೊತ್ತಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ ಬೈಲಹೊಂಗಲ ಸಿಪಿಐ ಸಂಗನಗೌಡ ನೇತೃತ್ವದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ದಾಳಿ ನಡೆಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಗೋಕಾಕ ಪಟ್ಟಣದಲ್ಲಿ ಬೃಹತ್ ಪ್ರಮಾಣದ ಜೂಜಾಟ ನಡೆಯುತ್ತಿದ್ದು, ಕೋಟ್ಯಂತರ ರೂ. ಹಣ ಜೂಜಾಟಕ್ಕೆ ಬಳಕೆಯಾಗಿದೆ. ಆದರೆ ಜೂಜಾಟ ನಿಯಂತ್ರಣಕ್ಕೆ ಸ್ಥಳೀಯ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿರುವುದೆ ನಗರದಲ್ಲಿ ರಾಜಾರೋಷವಾಗಿ ಜೂಜಾಟ ನಡೆಯುವುದಕ್ಕೆ ಕಾರಣವಾಗಿದೆ ಎಂಬ ವಂದತಿಗಳು ಕೇಳಿ ಬರುತ್ತಿವೆ ಅಲ್ಲದೆ ಇದರಲ್ಲಿ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಸಹ ದಟ್ಟವಾಗಿ ಕೇಳಿ ಬರುತ್ತಿವೆ
ಜಿಲ್ಲಾ ಪೊಲೀಸ್ ಇಲಾಖೆಗೆ ಈ ಕುರಿತು ಕೆಲವು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ತಂಡದಿಂದ ಈ ದಾಳಿ ನಡೆದಿದೆ.